ಯೋಧನ ಗನ್ ಕಸಿಯಲೆತ್ನಿಸಿದ ಅಪರಿಚಿತ ವ್ಯಕ್ತಿ ಗುಂಡೇಟಿಗೆ ಬಲಿ
Update: 2017-03-18 14:55 IST
ಪ್ಯಾರಿಸ್, ಮಾ18: ಒರ್ಲಿ ವಿಮಾನ ನಿಲ್ದಾಣದಲ್ಲಿ ಯೋಧನೊಬ್ಬನ ಗನ್ ಕಸಿಯಲೆತ್ನಿಸಿದ ಅಪರಿಚಿತ ವ್ಯಕ್ತಿಯೊಬ್ಬನನ್ನು ಯೋಧರೇ ಗುಂಡಿಟ್ಟು ಕೊಂದಿರುವ ಘಟನೆ ಶನಿವಾರ ನಡೆದಿದೆ ಎಂದು ಬಿಎಫ್‌ಎಂ ಟಿವಿ ವರದಿ ಮಾಡಿದೆ.
ಈ ಅನಿರೀಕ್ಷಿತ ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿರುವ ಜನರನ್ನು ತೆರವುಗೊಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಫ್ರಾನ್ಸ್ ಪೊಲೀಸರು ದೃಢಪಡಿಸಿದ್ದಾರೆ.