×
Ad

ರವಿವರ್ಮರ ದಮಯಂತಿ ಕಲಾಕೃತಿಗೆ 11ಕೋಟಿರೂ.

Update: 2017-03-18 16:17 IST

ನ್ಯೂಯಾರ್ಕ್, ಮಾ. 18: ಜಗತ್ತಿನ ಪ್ರಸಿದ್ಧ ಚಿತ್ರಕಾರ ಭಾರತದ ರಾಜಾ ರವಿವರ್ಮರ ದಮಯಂತಿ ಚಿತ್ರ 11.09ಕೋಟಿ ರೂಪಾಯಿಗೆ ಹರಾಜಾಗಿದೆ. ನ್ಯೂಯಾರ್ಕ್‌ನಲ್ಲಿನಡೆದ ಏಲಂನಲ್ಲಿ ನಿರೀಕ್ಷೆಗಿಂತ ಹೆಚ್ಚುಮೊತ್ತಕ್ಕೆ ಹರಾಜಾಗಿದೆ. ಈ ಪೈಂಟಿಂಗ್‌ಗೆ 4.58 ಕೋಟಿ ರೂಪಾಯಿ ಲಭಿಸಬಹುದು ಎಂದು ಮೊದಲು ಅಂದಾಜಿಸಲಾಗಿತ್ತು. ರವಿವರ್ಮರ ಹೊಳಪಿನ ಸೀರೆಧರಿಸಿದ ದಮಯಂತಿ ಪೈಂಟಿಂಗ್ ಭಾರತದ ಪಾರಂಪರಿಕ ರೀತಿಮತ್ತು ಯುರೋಪಿಯನ್ ನಿಚಾಂಶ ಮಿಶ್ರಣವಾದ ಚಿತ್ರ ಎಂದು ಹೇಳಲಾಗುತ್ತಿದೆ.

ಭಾರತದ ಇತರ ಚಿತ್ರಕಾರರಾದ ಸೈಯದ್ ಹೈದರ್ ರಾಝ, ಎಂ.ಎಫ್. ಹುಸೈನ್, ಜಹಾಂಗೀರ್ ಸಬವಾಲರ ಚಿತ್ರಗಳಿಗೂ ಹರಾಜಿನಲ್ಲಿ ಮನ್ನಣೆ ಸಿಕ್ಕಿದೆ. ಅವುಗಳು ಕೂಡಾ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ. ಅವುಗಳಿಗೆ ಒಟ್ಟು 43ಕೋಟಿ ರೂಪಾಯಿ ಸಿಕ್ಕಿದೆ ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಕಲೆಗಳ ಅಂತಾರಾಷ್ಟ್ರೀಯ ಮುಖ್ಯಸ್ಥ ಯಾಮಿನಿ ಮೆಹ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News