ವೃದ್ಧಾಪ್ಯದಲ್ಲಿ ವ್ಯಕ್ತಿಯ ಎತ್ತರ ಕುಗ್ಗುತ್ತದೆ.....ಏಕೆ ?

Update: 2017-03-18 15:53 GMT

ವ್ಯಕ್ತಿಯೋರ್ವ ವೃದ್ಧಾಪ್ಯಕ್ಕೆ ಜಾರುತ್ತಿದ್ದಂತೆ ನಿಧಾನವಾಗಿ ಆತನ/ಆಕೆಯ ಎತ್ತರವೂ ಕುಗ್ಗುತ್ತದೆ ಎನ್ನುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಏನು ಕಾರಣವಿರಬಹುದು ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ ?

ಇದಕ್ಕೆ ನಮ್ಮ ಬೆನ್ನುಮೂಳೆಯಲ್ಲಿನ ಡಿಸ್ಕ್ ಅಥವಾ ಬಿಲ್ಲೆಗಳೇ ಕಾರಣ!

ಮಾನವನ ಬೆನ್ನುಮೂಳೆ ಅಥವಾ ಕಶೇರು 33 ಸಣ್ಣಮೂಳೆಗಳನ್ನು ಹೊಂದಿದ್ದು, ಇವುಗಳನ್ನ ವರ್ಟೆಬ್ರಾ ಎಂದು ಕರೆಯುತ್ತಾರೆ. ಪ್ರತಿ ಎರಡು ವರ್ಟೆಬ್ರಾ ನಡುವೆ ಇಂಟರ್‌ವರ್ಟೆಬ್ರಲ್ ಡಿಸ್ಕ್ ಇರುತ್ತದೆ. ಈ ಡಿಸ್ಕ್ ಮೃದ್ವಸ್ಥಿಯಿಂದ ನಿರ್ಮಾಣ ಗೊಂಡಿರುತ್ತದೆ.

ಎಲ್ಲ ವರ್ಟೆಬ್ರಾಗಳು ಮತ್ತು ಅವುಗಳ ನಡುವಿನ ಡಿಸ್ಕ್‌ಗಳ ದಪ್ಪದ ಒಟ್ಟು ಮೊತ್ತ ಬೆನ್ನುಮೂಳೆಯ ಉದ್ದವಾಗಿರುತ್ತದೆ.

  ಇಂಟರ್ ವರ್ಟೆಬ್ರಲ್ ಡಿಸ್ಕ್ ಎರಡು ಭಾಗಗಳನ್ನು ಹೊಂದಿರುತ್ತದೆ. ಅದರ ಕೇಂದ್ರಭಾಗದಲ್ಲಿ ನ್ಯೂಕ್ಲಿಯಸ್ ಪಲ್ಪೋಸಸ್ ಇದ್ದರೆ ಅದರ ಸುತ್ತಲೂ ಇರುವ ಭಾಗವನ್ನು ಆ್ಯನುಲಸ್ ಫೈಬ್ರೊಸಸ್ ಎಂದು ಕರೆಯುತ್ತಾರೆ. ವ್ಯಕ್ತಿಯ ಯೌವನದಲ್ಲಿ ನ್ಯೂಕ್ಲಿಯಸ್ ಪಲ್ಪೋಸಸ್ ಸ್ಪಜ್‌ನಂತಹ ಸ್ವರೂಪವನ್ನು ಹೊಂದಿದ್ದು,ತೇವವನ್ನು ಹೊಂದಿರುತ್ತದೆ. ವಯಸ್ಸಾಗುತ್ತ ಹೋದಂತೆ ನಿರ್ಜಲೀಕರಣದಿಂದ ಇದು ಶುಷ್ಕಗೊಳ್ಳುತ್ತದೆ ಮತ್ತು ಇದರಿಂದಾಗಿ ಇಂಟರ್ ವರ್ಟೆಬ್ರಲ್ ಡಿಸ್ಕ್ ತನ ಮೂಲಸ್ವರೂಪವನ್ನು ಕಳೆದುಕೊಂಡು ಚಪ್ಪಟೆಯಾಗುತ್ತದೆ.

ಇದೇ ಕಾರಣದಿಂದ ಬೆನ್ನುಮೂಳೆ ತನ್ನ ಮೊದಲಿನ ಉದ್ದವನ್ನು ಕಳೆದುಕೊಳ್ಳುತ್ತದೆ ಮತ್ತು ವ್ಯಕ್ತಿಯ ಎತ್ತರ ವೃದ್ಧಾಪ್ಯದಲ್ಲಿ ಕುಗ್ಗುತ್ತದೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News