×
Ad

ಧರ್ಮ ನಿಂದನೆಯ ಬರಹ ಪ್ರಕಟಿಸಿದವನ ಹತ್ಯೆ

Update: 2017-03-18 23:54 IST

ಕೊಯಮತ್ತೂರು,ಮಾ.18: ಇಲ್ಲಿಗೆ ಸಮೀಪದ ದಕ್ಷಿಣ ಉಕ್ಕಡಂನ ಬಿಲಾಲ್ ಎಸ್ಟೇಟ್‌ನಲ್ಲಿ ಎಚ್.ಫಾರೂಕ್ ಎಂಬವರನ್ನು ಗುರುವಾರ ರಾತ್ರಿ ನಾಲ್ಕು ಮಂದಿ ಅಪರಿಚಿತರ ತಂಡವೊಂದು ಕಡಿದುಕೊಲೆ ಮಾಡಿದೆ. ದ್ರಾವಿಡರ್ ವಿಡುದಲೈ ಕಳಗಂ (ಡಿವಿಕೆ)ನ ಸದಸ್ಯನಾಗಿದ್ದನೆನ್ನಲಾದ ಫಾರೂಕ್, ಫೇಸ್‌ಬುಕ್‌ನಲ್ಲಿ ಧರ್ಮ ವಿರೋಧಿ ಅನಿಸಿಕೆಗಳನ್ನು ಪ್ರಕಟಿಸುತ್ತಿದ್ದನೆನ್ನಲಾಗಿದೆ.
ಈ ಮಧ್ಯೆ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 30 ವರ್ಷ ವಯಸ್ಸಿನ ಅನ್ಸಾತ್ ಎಂಬಾತ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಶರಣಾಗಿದ್ದಾರೆ. ಫಾರೂಕ್‌ನ ಧರ್ಮ ವಿರೋಧಿ ಅನಿಸಿಕೆಗಳು ಕೆಲವು ಜನರನ್ನು ರೊಚ್ಚಿಗೆಬ್ಬಿಸಿದ್ದವು. ಆತನ ಕೊಲೆಗೆ ಇದು ಕಾರಣವಾಗಿರುವ ಸಾಧ್ಯತೆಯಿದೆ’’ ಎಂದು ಕೊಯಮತ್ತೂರಿನ ಡಿಸಿಪಿ ಎಸ್.ಶರವಣನ್ ತಿಳಿಸಿದ್ದಾರೆ.
...............................................................

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News