×
Ad

ನೋಟು ರದ್ದತಿ ಎಫೆಕ್ಟ್: ಮಹಾರಾಷ್ಟ್ರ ಆದಾಯಕ್ಕೆ ಖೋತಾ ಎಷ್ಟು ಗೊತ್ತೇ?

Update: 2017-03-19 09:16 IST

ಮುಂಬೈ, ಮಾ.19: ಅಧಿಕ ಮೌಲ್ಯದ ನೋಟುಗಳನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಉತ್ಪಾದನೆ ಹಾಗೂ ಬಳಕೆ ಗಣನೀಯವಾಗಿ ಕುಸಿದಿರುವುದು ಮಹಾರಾಷ್ಟ್ರ ಸರ್ಕಾರದ ತೆರಿಗೆ ಆದಾಯಕ್ಕೆ ಕುತ್ತು ತಂದಿದೆ.

ನಿಗದಿತ ಗುರಿಯಿಂದ 4,903 ಕೋಟಿ ರೂಪಾಯಿಯಷ್ಟು ಕಡಿಮೆ ಆದಾಯ ಬಂದಿರುವುದು ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ. ವಿವಿಧ ತೆರಿಗೆ ಮೂಲಗಳಿಂದ 1.75 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಕೇವಲ 1.71 ಕೋಟಿ ರೂ,. ಆದಾಯ ಮಾತ್ರ ಬಂದಿದೆ.

ಆಸ್ತಿ ವರ್ಗಾವಣೆಯ ನೋಂದಣಿ ಹಾಗೂ ಮುದ್ರಾಂಕ ಶುಲ್ಕದಿಂದ ಬರುವ ಆದಾಯ ಗಣನೀಯವಾಗಿ ಕುಸಿದಿದೆ. ಈ ಮೂಲದ ಆದಾಯ ಸುಮಾರು 20 ಸಾವಿರ ಕೋಟಿ ರೂ.ಗೆ ಕುಸಿದಿದ್ದು, 20 ಸಾವಿರ ಕೋಟಿ ರೂ. ಆಗಿದೆ. ನೋಟು ರದ್ದತಿಯಿಂದಾಗಿ ಆಸ್ತಿ ಖರೀದಿ ಹಾಗೂ ನಿರ್ಮಾಣ ಕಾಮಗಾರಿಗೆ ಭಾರೀ ಹೊಡೆತ ಬಿದ್ದಿತ್ತು.

ಮದ್ಯ ಮಾರಾಟದಿಂದ ಬರುವ ಆದಾಯ ಕೂಡಾ ರೂ.15,343 ಕೋಟಿಯಿಂದ ರೂ.13,600 ಕೋಟಿಗೆ ಇಳಿದಿದೆ. ಅಂದರೆ ಸುಮಾರು 1,743 ಕೋಟಿ ರೂಪಾಯಿ ಆದಾಯ ಕುಸಿದಿದೆ. 3,200 ಕೋಟಿ ರೂಪಾಯಿ ಹೆಚ್ಚುವರಿ ಭೂಕಂದಾಯ ಸಂಗ್ರಹಿಸುವ ಗುರಿ ಹೊಂದಿದ್ದರೆ, ಕೇವಲ ರೂ.1,501 ಕೋಟಿಯಷ್ಟು ಮಾತ್ರ ಹೆಚ್ಚುವರಿ ಸಂಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News