×
Ad

ರೈತನಿಗೆ ಹೊಲದಲ್ಲಿ ಸಿಕ್ಕಿತು ಕೋಟಿ ಕೋಟಿ ಹಣ !

Update: 2017-03-19 12:37 IST

ಕೊಲಂಬಿಯ, ಮಾ. 19: ಇಲ್ಲಿನ ರೈತನೊಬ್ಬನಿಗೆ ಜಮೀನನ್ನು ಅಗೆಯುವಾಗ ಒಂದು ಡಬ್ಬಿ ಸಿಕ್ಕಿದೆ. ಅದನ್ನು ತೆರೆದಾಗ ಅದರಲ್ಲಿ ಭಾರತೀಯ ಮೌಲ್ಯದ ಸುಮಾರು 4000 ಕೋಟಿ ರೂಪಾಯಿಷ್ಟು ಕೊಲಂಬಿಯದ ಹಣ ದೊರಕಿದೆ. ಅರುವತ್ತುವರ್ಷ ವಯಸ್ಸಿನ ಹಿರಿಯ ರೈತ ಜೋಸ್ ಮೈರಿಯೆನಾ ಕಾರ್ಟೊಲೊಸ್ ಅದೃಷ್ಟ ಹೀಗೆ ಒಲಿದರೂ ಅದನ್ನು ತನ್ನ ಬಳಿ ಇಟ್ಟು ಕೊಳ್ಳಲು ಸಿದ್ಧನಿರಲಿಲ್ಲ. ಆತ ಸ್ಥಳೀಯ ಸರಕಾರಿ ಅಧಿಕಾರಿಗಳಿಗೆ ಜಮೀನನಲ್ಲಿಸಿಕ್ಕಿದ ಕೊಲಂಬಿಯನ್ ಡಾಲರ್‌ಗಳನ್ನು ನೀಡಿದ್ದಾನೆ. ಸರಕಾರ ಜೋಸ್‌ನಿಗೆ 3000 ಡಾಲರ್ ಅಂದರೆ ಸುಮಾರು 2ಲಕ್ಷ ರೂಪಾಯಿ ಇನಾಮು ನೀಡಿದೆ.

ಜೋಸ್ ಅಗೆಯುತ್ತಿದ್ದಾಗ ನೀಲಿ ಬಣ್ಣದ ಒಂದು ಡಬ್ಬಿಸಿಕ್ಕಿತ್ತು. ಮೊದಲು ಅದನ್ನು ಆತ ನಿರ್ಲಕ್ಷಿಸಿದ್ದ. ಆದರೆ ಅದೇಕೊ ನಂತರ ಅದನ್ನು ತೆರೆದು ನೋಡಬೇಕು ಎಂದು ಜೋಸ್‌ನಿಗೆ ಅನಿಸಿತ್ತು. ಆತ ತೆರೆದು ನೋಡಿದಾಗ ಅದರಲ್ಲಿ ನಾಲ್ಕುಸಾವಿರ ಕೋಟಿ ರೂಪಾಯಿ ಇತ್ತು. ಈ ಹಣ ಕೊಲಂಬಿಯದ ಡ್ರಗ್ ಕಿಂಗ್ ಪಾಬ್ಲೊನಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಏನಿದ್ದರೂ ಈಗ ಕೊಲಂಬಿಯ ಸರಕಾರ ಈ ಹಣವನ್ನು ಸಮಾಜ ಕಲ್ಯಾಣಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News