ಭಾರತದಲ್ಲಿ ಐವರು ಅವಿವಾಹಿತ ಮುಖ್ಯಮಂತ್ರಿಗಳು
Update: 2017-03-19 14:23 IST
ಹೊಸದಿಲ್ಲಿ,ಮಾ. 19: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಸುವುದರೊಂದಿಗೆ ದೇಶದಲ್ಲಿ ಐದು ಮಂದಿ ಮದುವೆಯಾಗದ ಮುಖ್ಯಮಂತ್ರಿ ಆಗಲಿದ್ದಾರೆ. ಬಿಜೆಪಿ ಆಳ್ವಿಕೆ ಇರುವ ಏಳು ರಾಜ್ಯಗಳಲ್ಲಿ ಮೂರರಲ್ಲಿ ಅವಿವಾಹಿತ ಮುಖ್ಯಮಂತ್ರಿಗಳಿದ್ದಾರೆ.
ಅಸ್ಸಾಂನ ಸರ್ಬಾನಂದ ಸೋನೊವಾಲ್, ಹರಿಯಾಣದ ಮನೋಹರಲಾಲ್ ಖಟ್ಟರ್, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಬಿಜೆಪಿ ಅವಿವಾಹಿತ ಮುಖ್ಯಮಂತ್ರಿಗಳಾಗಿದ್ದಾರೆ. ಇನ್ನುಳಿದ ಇಬ್ಬರು ಒಡಿಸ್ಸದ ನವೀನ್ ಪಟ್ನಾಯಕ್ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವಿವಾಹಿತ ಮುಖ್ಯಮಂತ್ರಿಗಳಾಗಿದ್ದಾರೆ.