ಒಡಿಶಾ:ಕೋಬ್ರಾ ಕಮಾಂಡೊ ಆತ್ಮಹತ್ಯೆ
Update: 2017-03-19 15:58 IST
ಭುವನೇಶ್ವರ,ಮಾ.19: ಸಿಆರ್‌ಪಿಎಫ್‌ನ ಅರಣ್ಯ ಕಾಳಗ ಘಟಕ ‘ಕೋಬ್ರಾ’ಪಡೆಯ ಕಮಾಂಡೊ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ಓರ್ವರು ಒಡಿಶಾದ ಕೋರಾಪತ್ ಜಿಲ್ಲೆಯ ಸುನಾಬೆಡಾದಲ್ಲಿನ ತನ್ನ ಶಿಬಿರದಲ್ಲಿ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಂಕರ ಪ್ರಸಾದ್ ಅವರು ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಕೋಬ್ರಾ ಪಡೆಯ 202ನೇ ಬಟಾಲಿಯನ್‌ಗೆ ಸೇರಿದ್ದ ಪ್ರಸಾದ್ ಸುನಾಬೆಡಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ನಿಯೋಜಿತರಾಗಿದ್ದರು
ಘಟನೆಯ ಕುರಿತಂತೆ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.