ಜೆಎನ್‌ಯು ಅಧ್ಯಯನ ಕೇಂದ್ರಕ್ಕೆ ಅನುದಾನ ನಿಲ್ಲಿಸಿಲ್ಲ: ಯುಜಿಸಿ ಸ್ಪಷ್ಟನೆ

Update: 2017-03-19 16:41 GMT

 ಹೊಸದಿಲ್ಲಿ,ಮಾ.19: ಇಲ್ಲಿಯ ಜೆಎನ್‌ಯುದಲ್ಲಿಯ ತಾರತಮ್ಯ ಮತ್ತು ಪ್ರತ್ಯೇಕತೆ ಅಧ್ಯಯನ ಕೇಂದ್ರಕ್ಕೆ ತಾನು ಅನುದಾನಗಳನ್ನು ಸ್ಥಗಿತಗೊಳಿಸಿದ್ದೇನೆ ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿರುವ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ವು, ಅಂತಹ ಯಾವುದೇ ಆದೇಶವನ್ನು ತಾನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಪತ್ರವು ನಕಲಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ತಾನು ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಅದು ಹೇಳಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆದೇಶದಂತೆ ಅಧ್ಯಯನ ಕೇಂದ್ರಕ್ಕೆ ತಾನು ಅನುದಾನವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿ ಯುಜಿಸಿ ಬರೆದಿದ್ದ ಪತ್ರವೊಂದನ್ನು ಜೆಎನ್‌ಯು ಸ್ವೀಕರಿಸಿತ್ತು ಎಂದು ವರದಿಯಾಗಿತ್ತು.

ಉಲ್ಲೇಖಿತ ಪತ್ರವು ನಕಲಿಯಾಗಿದೆ. ಯುಜಿಸಿಯ ದಾಖಲೆಗಳನ್ನು ಪರಿಶೀಲಿಸಲಾ ಗಿದೆ. ಯುಜಿಸಿಯ ಅಧೀನ ಕಾರ್ಯದರ್ಶಿ ಸುಷ್ಮಾ ರಾಠೋಡ್ ಅವರು ಇಂತಹ ಯಾವುದೇ ಪತ್ರವನನ್ನು ಬರೆದಿಲ್ಲ ಮತ್ತು ಇಂತಹ ಯಾವುದೇ ಪತ್ರ ಯುಜಿಸಿಯಿಂದ ರವಾನೆಯಾಗಿಲ್ಲ ಎಂದು ಯುಜಿಸಿ ತಿಳಿಸಿದೆ.

ಈ ಪತ್ರವು ಜೆಎನ್‌ಯು ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮತ್ತು ದೇಶಾದ್ಯಂತದ ಇಂತಹ 35 ಕೇಂದ್ರಗಳಲ್ಲಿ ಅಸಮಾಧಾನದ ಅಲೆಗಳನ್ನೆಬ್ಬಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News