ನಕಲಿ ನೋಟುಗಳ ಕಳ್ಳಸಾಗಣೆ: ಚೆನ್ನೈ ಬಂದರಿನಲ್ಲಿ ಶೋಧ ಕಾರ್ಯಾಚರಣೆ

Update: 2017-03-20 15:54 GMT

ಚೆನ್ನೈ, ಮಾ.20: ವಿದೇಶದಿಂದ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಚೆನ್ನೈ ಬಂದರಿನಲ್ಲಿ ಕಸ್ಟಮ್ಸ್ ಮತ್ತು ಡಿಆರ್‌ಐ (ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.

   ಹೊಸ 500 ಮತ್ತು 2000 ರೂ. ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳೂ ಸೇರಿದಂತೆ ನಕಲಿ ನೋಟುಗಳನ್ನು ಕಳ್ಳ ಸಾಗಣೆ ಮೂಲಕ ದೇಶದೊಳಗೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚೆನ್ನೈ, ತುಘ್‌ಲಕಾಬಾದ್, ಕಾನ್ಪುರ, ಕೋಲ್ಕತಾ ಮತ್ತು ಮುಂಬೈ ಬಂದರುಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಅಥವಾ ನೇಪಾಲದಿಂದ ನಕಲಿ ನೋಟುಗಳನ್ನು ಭಾರತಕ್ಕೆ ಕಳ್ಳ ಸಾಗಣೆ ಮಾಡುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು ಈ ದೇಶಗಳಿಂದ ಬಂದಿರುವ ಎಲ್ಲಾ ಸರಕುಗಳನ್ನೂ ತಪಾಸಣೆ ನಡೆಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News