​ತಾಯಿಯನ್ನೇ ಕತ್ತು ಹಿಸುಕಿ ಕೊಂದ ಅಮೇರಿಕನ್ ಭಾರತೀಯ ಬಾಲಕ !

Update: 2017-03-21 06:23 GMT

ವಾಷಿಂಗ್ಟನ್, ಮಾ.21: ತನ್ನ ಹೆತ್ತ ತಾಯಿಯನ್ನೇ ಕೊಂದ ಆರೋಪದಲ್ಲಿ ಉತ್ತರ ಕ್ಯಾರೊಲಿನಾದ 17 ವರ್ಷದ ಭಾರತೀಯ ಅಮೇರಿಕನ್ ಬಾಲಕನನ್ನು ಬಂಧಿಸಲಾಗಿದೆ. ಈ ಘಟನೆ ಇಲ್ಲಿನ ಭಾರತೀಯ ಸಮುದಾಯದಲ್ಲಿ ಆಘಾತದ ಅಲೆಯನ್ನೆಬ್ಬಿಸಿದೆ. ಘಟನೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಆರೋಪಿ ಅರ್ನವ್ ಉಪ್ಪಲಪಟಿಯನ್ನು ಪೊಲೀಸರು ಕಳೆದ ವಾರ ಬಂಧಿಸಿದ್ದರು.

ಡ್ಯೂಕ್ ಮೆಡಿಕಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ಆತನ ತಾಯಿ 51 ವರ್ಷದ ನಳಿನಿ ತೆಲ್ಲಪ್ರೊಲು ಅವರನ್ನು ಅರ್ನವ್ ಡಿಸೆಂಬರ್ 17, 2015ರಲ್ಲಿ ತಲೆಗೆ ಪ್ಲಾಸ್ಟಿಕ್ ಚೀಲವೊಂದನ್ನು ಹಾಕಿಕತ್ತು ಹಿಸುಕಿ ಸಾಯಿಸಿದ್ದನೆಂದು ಆರೋಪಿಸಲಾಗಿದೆ.

ತಲೆಗೆ ಪ್ಲಾಸ್ಟಿಕ್ ಚೀಲ ಹಾಕಲ್ಪಟ್ಟ ಸ್ಥಿತಿಯಲ್ಲಿ ತನ್ನ ತಾಯಿಯ ಶವ ಗ್ಯಾರೇಜಿನಲ್ಲಿದ್ದ ಕಾರೊಂದರಲ್ಲಿ ತಾನು ಶಾಲೆಯಿಂದ ಹಿಂದಿರುಗಿ ಬಂದಾಗ ಪತ್ತೆಯಾಗಿತ್ತು ಎಂದು ಪೊಲೀಸರಿಗೆ ಆತ ತಿಳಿಸಿದ್ದ. ಆಗ ಆತನಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಆತನ ತಾಯಿಯ ಕಾಲುಗಳು ಕಾರಿನ ಹಿಂಬದಿ ಸೀಟಿನಲ್ಲಿತ್ತು ಹಾಗೂ ಆಕೆಯನ್ನು ಹೊಡೆದು ಕತ್ತು ಹಿಚುಕಿ ಸಾಯಿಸಲಾಗಿದೆ ಎಂದು ಪೊಲೀಸರು ನಂಬಿದ್ದರು.

ಕುಟುಂಬವು ತನ್ನ ಎರಡು ಮಹಡಿಗಳ 1.5 ಲಕ್ಷ ಅಮೇರಿಕನ್ ಡಾಲರ್ ಮೌಲ್ಯದ ನಿವಾಸದಲ್ಲಿ ವಾಸಿಸುತ್ತಿತ್ತು. ಅವರ ಮನೆಯೊಳಗೆ ಅಂದು ಯಾರೂ ಬಲವಂತವಾಗಿ ಪ್ರವೇಶಿಸಿದ ಕುರುಹುಗಳೂ ಇರಲಿಲ್ಲ.

ನಳಿನಿಯ ದೇಹದ ತಂಬೆಲ್ಲಾ ಪರಚಿದ ಗಾಯಗಳಾಗಿದ್ದವಲ್ಲದೆ ಆಕೆಯ ಕುತ್ತಿಗೆಯ ಎಲುಬು ಕೂಡ ಮುರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News