ಬಿಲಿಯಾಧೀಶ ದಾನಿ ರಾಕ್‌ಫೆಲರ್ ನಿಧನ

Update: 2017-03-21 15:18 GMT

ನ್ಯೂಯಾರ್ಕ್, ಮಾ. 21: ಬಿಲಿಯಾಧೀಶ ದಾನಿ ಹಾಗೂ ಚೇಸ್ ಮ್ಯಾನ್‌ಹಟನ್ ಬ್ಯಾಂಕ್‌ನ ಮಾಜಿ ಮುಖ್ಯಸ್ಥ ಡೇವಿಡ್ ರಾಕ್‌ಫೆಲರ್ ಸೋಮವಾರ ನಿಧನ ಹೊಂದಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.

ನ್ಯೂಯಾರ್ಕ್ ನಗರದ ಪೊಕಾಂಟಿಕೊ ಹಿಲ್ಸ್‌ನಲ್ಲಿರುವ ತನ್ನ ಮನೆಯಲ್ಲಿ ಸೋಮವಾರ ಹೃದಯ ವೈಫಲ್ಯದಿಂದಾಗಿ ಅವರು ನಿದ್ದೆಯಲ್ಲೇ ಇಹಲೋಕ ತ್ಯಜಿಸಿದರು ಎಂದರು ವಕ್ತಾರೆ ಫ್ರೇಸರ್ ಸೀಟೆಲ್ ಹೇಳಿದರು.

ಸೋಮವಾರ ಬಿಡುಗಡೆಗೊಂಡ ಫೋರ್ಬ್ಸ್ ಮ್ಯಾಗಝಿನ್‌ನ ಬಿಲಿಯಾಧೀಶರ ಪಟ್ಟಿಯಲ್ಲಿ ರಾಕ್‌ಫೆಲರ್ 581ನೆ ಸ್ಥಾನದಲ್ಲಿದ್ದಾರೆ. ಅವರು ಒಟ್ಟು ಸಂಪತ್ತು 3.3 ಬಿಲಿಯ ಡಾಲರ್ (21,540 ಕೋಟಿ ರೂಪಾಯಿ).

ಅವರು ಸ್ಥಾಪಿಸಿದ ‘ರಾಕ್‌ಫೆಲರ್ ಫೌಂಡೇಶನ್’ ದಾನ ಧರ್ಮಗಳಿಗೆ ಪ್ರಸಿದ್ಧಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News