×
Ad

ಅಜ್ಮೀರ್ ದರ್ಗಾ ಬಾಂಬು ಸ್ಫೋಟ ಪ್ರಕರಣ:ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

Update: 2017-03-22 13:05 IST

ಹೊಸದಿಲ್ಲಿ, ಮಾ.22: ಅಜ್ಮೀರ್ ದರ್ಗಾ ಬಾಂಬು ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿರುವ ಭವೇಶ್ ಪಟೇಲ್ ಹಾಗೂ ದೇವೇಂದ್ರ ಗುಪ್ತಾಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಇಬ್ಬರು ಆರೋಪಿಗಳಿಗೆ ಕ್ರಮವಾಗಿ 5000 ಹಾಗೂ 10,000 ರೂ. ದಂಡವನ್ನು ವಿಧಿಸಿದೆ.
 

ಎನ್‌ಐಎ ವಿಶೇಷ ನ್ಯಾಯಾಲಯ ಮಾ.8 ರಂದು ನೀಡಿರುವ ತೀರ್ಪಿನಲ್ಲಿ ಭವೇಶ್ ಪಟೇಲ್, ದೇವೇಂದ್ರ ಗುಪ್ತಾ ಹಾಗೂ ಸುನೀಲ್ ಜೋಶಿಯವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ಪ್ರಕರಣದಲ್ಲಿ ಪ್ರಧಾನ ಸಂಚುಕೋರನಾಗಿದ್ದ ಅಸೀಮಾನಂದ ಸಹಿತ ಇತರ ಏಳು ಮಂದಿಯನ್ನು ದೋಷಮುಕ್ತಗೊಳಿಸಿತ್ತು. ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಮೂವರು ಆರೋಪಿಗಳ ಪೈಕಿ ಜೋಶಿ 2014ರ ಜೂನ್‌ನಲ್ಲಿ ನಿಧನರಾಗಿದ್ದಾರೆ.

2007ರ ಅಕ್ಟೋಬರ್ 11 ರಂದು ರಾಜಸ್ಥಾನದ ಖ್ವಾಜಾ ಮೊಹಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಸಂಜೆ 6.12ಕ್ಕೆ ಸಂಭವಿಸಿದ್ದ ಶಕ್ತಿಶಾಲಿ ಬಾಂಬು ಸ್ಫೋಟದಲ್ಲಿ ಮೂವರು ಯಾತ್ರಿಕರು ಸಾವನ್ನಪ್ಪಿದರೆ, 15 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News