×
Ad

ಹದಿಹರೆಯದ ಬಾಲಕಿ ಅತ್ಯಾಚಾರ ಫೇಸ್‌ಬುಕ್‌ನಲ್ಲಿ ಲೈವ್

Update: 2017-03-22 17:20 IST

ಶಿಕಾಗೊ, ಮಾ. 22: ಅಮೆರಿಕದಲ್ಲಿ ಹದಿಹರೆಯದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ನಡೆಸುತ್ತಿರುವ ದೃಶ್ಯವನ್ನು ಲೈವ್ ಆಗಿ ಪ್ರದರ್ಶಿಸಿದ ಘಟನೆ ನಡೆದಿದೆ. ಹಲವಾರುಮಂದಿ ಈ ದೃಶ್ಯವನ್ನುನೋಡಿದ್ದರೂ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಅತ್ಯಾಚಾರಕ್ಕೊಳಗಾದ ಕಳೆದ ರವಿವಾರ ಬಾಲಕಿ ನಾಪತ್ತೆಯಾಗಿದ್ದಳು.

ರವಿವಾರ ಮಧ್ಯಾಹ್ನ ಅಂಗಡಿಗೆ ಹೋದ ಬಾಲಕಿ ನಂತರ ಫೇಸ್‌ಬುಕ್ ಮೂಲಕಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿರುವುದು ಲೈವ್ ಆಗಿದೆ ಎಂದು ವರದಿಯಾಗಿದೆ. ತನ್ನ ಪುತ್ರಿ ಅತ್ಯಾಚಾರಕ್ಕೊಳಗಾದ ವಿವರ ತಿಳಿದ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಲ್ವತ್ತಕ್ಕೂ ಹೆಚ್ಚು ಮಂದಿ ಅತ್ಯಾಚಾರದ ನೇರ ಪ್ರಸಾರವನ್ನು ನೋಡಿದರೂ ಯಾರು ಕೂಡಾ ಈ ವಿವರವನ್ನು ಪೊಲೀಸರಿಗೆ ತಿಳಿಸಲು ಮುಂದಾಗದ್ದು ದುರದೃಷ್ಟಕರ ಎಂದು ಶಿಕಾಗೊ ಪೊಲೀಸರು ಹೇಳುತ್ತಾರೆ. ಬಾಲಕಿ ಕಾಣೆಯಾದ ಬೆನ್ನಿಗೆ ತನಿಖೆ ನಡೆಸಲಾಗಿದ್ದು. ಬಾಲಕಿಯನ್ನು ಸೋಮವಾರ ಪತ್ತೆಹಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಂತರ ಪೊಲೀಸರು ಫೇಸ್‌ಬುಕ್‌ನಿಂದ ಅತ್ಯಾಚಾರಕ್ಕೊಳಗಾದ ವೀಡಿಯೊವನ್ನು ತೆಗೆಸಿದ್ದಾರೆ. ತನ್ನ ಅತ್ಯಾಚಾರ ನಡೆಸಿದ ಓರ್ವ ವ್ಯಕ್ತಿಯನ್ನು ಬಾಲಕಿ ಗುರುತಿಸಿದ್ದರೂ ಈವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News