ಸಿರಿಯ ಶಾಲೆಯ ಮೇಲೆ ಅಮೆರಿಕ ನೇತೃತ್ವದ ಮಿತ್ರಪಡೆ ದಾಳಿ

Update: 2017-03-22 13:15 GMT

ಬೆರೂತ್, ಮಾ. 22: ಸಿರಿಯದಲ್ಲಿ ಭಯೋತ್ಪಾದಕರ ವಶದಲ್ಲಿರುವ ಪಟ್ಟಣವೊಂದರ ಸಮೀಪದಲ್ಲಿ ನಿರಾಶ್ರಿತ ಶಿಬಿರವಾಗಿ ಬಳಸಲಾಗುತ್ತಿದ್ದ ಶಾಲೆಯೊಂದರ ಮೇಲೆ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 33 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರದ ರಾಜ್ಯ 'ರಕ'ದಲ್ಲಿ ಐಸಿಸ್ ನಿಯಂತ್ರಣದಲ್ಲಿರುವ ಅಲ್-ಮನ್ಸೂರಾ ಪಟ್ಟಣದ ಮೇಲೆ ನಡೆದ ಮಂಗಳವಾರ ಮುಂಜಾನೆ ದಾಳಿ ನಡೆಯಿತು ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

''33 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಈಗ ಖಚಿತಪಡಿಸಬಹುದಾಗಿದೆ. ಸತ್ತವರು ರಕ, ಅಲೆಪ್ಪೊ ಮತ್ತು ಹಾಮ್ಸ್ ನಗರಗಳಿಂದ ಸ್ಥಳಾಂತರಗೊಂಡವರು'' ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹ್ಮಾನ್ ಹೇಳಿದರು.

''ಅವಶೇಷಗಳ ಅಡಿಯಿಂದ ದೇಹಗಳನ್ನು ಹೊರದೆಗೆಯುವ ಕಾರ್ಯ ಇನ್ನೂ ನಡೆಯುತ್ತಿದೆ. ಇಬ್ಬರನ್ನು ಮಾತ್ರ ಜೀವಂತವಾಗಿ ಹೊರಗೆಳೆಯಲಾಗಿದೆ'' ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News