ಹಿರಿಯ ನಾಗರಿಕರ ರೈಲ್ವೇ ಟಿಕೆಟ್‌ಗೆ ಆಧಾರ್ ಕಡ್ಡಾಯವಲ್ಲ
Update: 2017-03-22 19:21 IST
ಹೊಸದಿಲ್ಲಿ, ಮಾ.22: ಹಿರಿಯ ನಾಗರಿಕರು ರೈಲ್ವೇ ಟಿಕೆಟಿನಲ್ಲಿ ರಿಯಾಯಿತಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ . ಆದರೆ ಹಿರಿಯ ನಾಗರಿಕರ ದತ್ತಾಂಶ ್ತ ಸಂಚಯ ರಚಿಸಲು ರೈಲ್ವೇ ಇಲಾಖೆ ಪ್ರಕ್ರಿಯೆ ಆರಂಭಿಸಿದೆ ಎಂದು ಲೋಕಸಭೆಯಲ್ಲಿಂದು ರೈಲ್ವೇ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಜನವರಿ 1ರಿಂದ ರೈಲ್ವೇ ಇಲಾಖೆಯು ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್‌ನ ಮಾಹಿತಿಯ ಆಧಾರದಲ್ಲಿ ಹಿರಿಯ ನಾಗರಿಕರ ದತ್ತಾಂಶ ಸಂಚಯ ರೂಪಿಸಲು ಪ್ರಕ್ರಿಯೆ ಆರಂಭಿಸಿದೆ .
ಹಿರಿಯ ನಾಗರಿಕರ ರಿಯಾಯಿತಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದ ಸಚಿವರು, ನಗದು ರಹಿತ ಟಿಕೆಟ್ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶವಿದೆ ಎಂದಿದ್ದಾರೆ.
ನಗದುರಹಿತ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಜಾರಿಗೆ ತರುವುದು ಸರಕಾರದ ಅಂತಿಮ ಗುರಿಯಾಗಿದೆ. ಆದರೆ ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದು ತಕ್ಷಣದ ಆದ್ಯತೆಯಾಗಿದೆ ಎಂದವರು ತಿಳಿಸಿದ್ದಾರೆ.