ಉ.ಪ್ರ. ಸಚಿವರಿಗೆ ಖಾತೆ ಹಂಚಿಕೆ: ಗೃಹ ಮತ್ತು ವಿತ್ತ ಇಲಾಖೆ ಸಿಎಂ ವಶದಲ್ಲಿ
Update: 2017-03-22 19:28 IST
ಹೊಸದಿಲ್ಲಿ, ಮಾ.22: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿದ್ದು ಗೃಹ ಮತ್ತು ವಿತ್ತ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ವೌರ್ಯ ಮತ್ತು ದಿನೇಶ್ ಶರ್ಮ ಅವರಿಗೆ ಕ್ರಮವಾಗಿ ಲೋಕೋಪಯೋಗಿ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ನೀಡಲಾಗಿದೆ.
ಮಂಗಳವಾರ ದಿಲ್ಲಿಗೆ ಆಗಮಿಸಿದ್ದ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿ ಖಾತೆಗಳ ಹಂಚಿಕೆ ಕುರಿತು ಮಾತುಕತೆ ನಡೆಸಿದ್ದರು.