ಮಾ.23ರಿಂದ ಬಾಲಕಾರ್ಮಿಕ ಜನ ಜಾಗೃತಿಗಾಗಿ ಬೀದಿ ನಾಟಕ

Update: 2017-03-22 18:35 GMT

ಮಂಗಳೂರು, ಮಾ.22: ಬಾಲಕಾರ್ಮಿಕ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸಲು ಪ.ಜಾತಿ ಮತ್ತು ಪ.ಪಂಗಡದವರು ಹೆಚ್ಚಾಗಿ ವಾಸಿಸುವ ಕಾಲನಿ ಅಥವಾ ಸ್ಲಂಗಳಿಗೆ ತೆರಳಿ ಬೀದಿನಾಟಕ ಪ್ರದರ್ಶಿಸುವ ಮೂಲಕ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲಾದ್ಯಂತ ಮಾ.23ರಿಂದ ಬೀದಿ ನಾಟಕ ಏರ್ಪಡಿಸಲಾಗಿದೆ.

 ಮಾ.23ರಂದು ಬೆಳಗ್ಗೆ 10ಕ್ಕೆ ಮೂಡುಬಿದಿರೆ, 12ಕ್ಕೆ ಮುಲ್ಕಿ ಲಿಂಗಪ್ಪಯನ ಕಾಡು), ಸಂಜೆ 4ಕ್ಕೆ ಕಾವೂರು ಅಶೋಕನಗರ, ಸಂಜೆ 6ಕ್ಕೆ ಅಡ್ಯಾರ್, ಮಾ.24ರಂದು ಬೆಳಗ್ಗೆ 10ಕ್ಕೆ ಜಿಲ್ಲಾಕಾರಿ ಕಚೇರಿ ಆವರಣ, ಸಂಜೆ 4ಕ್ಕೆ ಸೆಂಟ್ರಲ್ ಮಾರ್ಕೆಟ್, ಸಂಜೆ 5ಕ್ಕೆ ಲಾಲ್‌ಬಾಗ್ ಶ್ರೀದೇವಿ ಕಾಲೇಜು ಹಿಂದುಗಡೆ, ಸಂಜೆ 6ಕ್ಕೆ ಬಾಬೂಜಿ ನಗರ ಕೊಟ್ಟಾರ, ಮಾ.25ರಂದು ಬೆಳಗ್ಗೆ 10ಕ್ಕೆ ಕಂಕನಾಡಿ, ಸಂಜೆ 4ಕ್ಕೆ ಸೂಟರ್‌ಪೇಟೆ, ವೆಲೆನ್ಸಿಯಾ, ಪಾಂಡೇಶ್ವರ, ಮಾ.26ರಂದು ಬೆಳಗ್ಗೆ 10ಕ್ಕೆ ಪಜೀರ್, ಸಂಜೆ 4ಕ್ಕೆ ಪುದು, 5ಕ್ಕೆ ವೀರಕಂಬ, 6ಕ್ಕೆ ಮಂಗಳಪದವು, ಮಾ.27ರಂದು ಬೆಳಗ್ಗೆ 10ಕ್ಕೆ ಕಡಬ, 4ಕ್ಕೆ 34ನೆಕ್ಕಿಲಾಡಿ ಉಪ್ಪಿನಂಗಡಿ, ಸಂಜೆ 5ಕ್ಕೆ ಕುಂಬ್ರ, 6ಕ್ಕೆ ಪುತ್ತೂರು, ಮಾ.28ರಂದು ಪೂ.11ಕ್ಕೆ ಸುಳ್ಯ, ಸಂಜೆ 4ಕ್ಕೆ ಜಾಲ್ಸೂರು, ಅಜ್ಜಾವರ, ಬೆಳ್ಳಾರೆ, ಮಾ.30ರಂದು ಬೆಳಗ್ಗೆ 10ಕ್ಕೆ ಕೆಲ್ಲೆಕೆರೆ, ಸಂಜೆ 4ಕ್ಕೆ ಮಾಚಾರು, 5ಕ್ಕೆ ಧರ್ಮಸ್ಥಳ ಅಶೋಕನಗರ, ಸಂಜೆ 6ಕ್ಕೆ ಕನ್ಯಾಡಿಯಲ್ಲಿ ಬೀದಿ ನಾಟಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News