ಲಂಡನ್ ಸಂಸತ್ ದಾಳಿ ಪ್ರಕರಣದಲ್ಲಿ ಭಾರತೀಯರು ಮೃತಪಟ್ಟಿಲ್ಲ: ಸುಷ್ಮಾ
ಹೊಸದಿಲ್ಲಿ, ಮಾ.23 ಬ್ರಿಟನ್ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಆದರೆ ಈ ಪೈಕಿ ಯಾರೂ ಭಾರತೀಯರು ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಜತೆಗೆ ನಿಕಟ ಸಂಪರ್ಕದಲ್ಲಿದ್ದು, ಲಂಡನ್‌ನಲ್ಲಿರುವ ಭಾರತೀಯರಿಗೆ ಎಲ್ಲ ಅಗತ್ಯ ನೆರವನ್ನೂ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಮಾಹಿತಿ ಅಥವಾ ನೆರವು ಅಗತ್ಯವಾದಲ್ಲಿ ಭಾರತೀಯರು ಹೈಕಮಿಷನ್‌ನ ಸಾರ್ವಜನಿಕ ಸ್ಪಂದನೆ ಘಟಕವನ್ನು ಸಂಪರ್ಕಿಸಬಹುದು ಎಂದು ದೂರವಾಣಿ ಸಂಖ್ಯೆಯನ್ನೂ ನೀಡಿದ್ದಾರೆ. (020-86295950 ಮತ್ತು 020-76723035).
ಈ ಮಧ್ಯೆ ಭಾರತೀಯ ಹೈಕಮಿಷನ್ ಹೇಳಿಕೆ ನೀಡಿ, ನಾಗರಿಕರು ಪಾರ್ಲಿಮೆಂಟ್ ಸ್ಕ್ವೇರ್ ಪ್ರದೇಶಕ್ಕೆ ತೆರಳದಂತೆ ಹಾಗೂ ದಾಳಿ ಘಟನೆ ಬಗ್ಗೆ ಅಗತ್ಯ ಮಾಹಿತಿಗೆ ಮೆಟ್ರೋಪಾಲಿಟನ್ ಪೊಲೀಸ್ ವೆಬ್‌ಸೈಟ್ ಪರಿಶೀಲಿಸುವಂತೆ ಸಲಹೆ ಮಾಡಿದೆ. ಈ ಭಯೋತ್ಪಾದಕ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.