ಅಶ್ಲೀಲ ವೀಡಿಯೊ ತಡೆಯಲು ಸಮಿತಿ ರಚಿಸಿದ ಸುಪ್ರೀಂಕೋರ್ಟು

Update: 2017-03-23 08:36 GMT

 ಹೊಸದಿಲ್ಲಿ,ಮಾ. 3: ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ವೀಡಿಯೊಗಳು ಪ್ರಸಾರಗೊಳ್ಳದಂತೆ ತಡೆಯಲು ತಾಂತ್ರಿಕ ಪರಿಹಾರ ಕಂಡು ಹುಡುಕಲಿಕ್ಕಾಗಿ ಪ್ರಮುಖ ಇಂಟರ್‌ನೆಟ್ ಕಂಪೆನಿ ಮತ್ತು ಕೇಂದ್ರಸರಕಾರದ ಪ್ರತಿನಿಧಿಗಳನ್ನು ಸೇರಿಸಿಸುಪ್ರೀಂಕೋರ್ಟು ಸಮಿತಿಯೊಂದನ್ನು ರೂಪಿಸಿದೆ.

 ಗೂಗಲ್ ಇಂಡಿಯ, ಮೈಕ್ರೋಸಾಫ್ಟ್ ಇಂಡಿಯ, ಯಾಹೂ ಇಂಡಿಯ, ಫೇಸ್‌ಬುಕ್ ಮುಂತಾದ ಕಂಪೆನಿಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ನ್ಯಾಯಾಧೀಶರಾದ ಮದನ್ ಬಿ. ಲೋಕೂರ್, ಯು.ಯು. ಲಿಲಿತಾರಿರುವ ಸುಪ್ರೀಂಕೋರ್ಟು ಪೀಠ ರಚಿಸಿದೆ.

 ಹದಿನೈದು ದಿವಸಗಳೊಳಗೆ ಸಭೆ ಸೇರಿ ಪರಿಹಾರೋಪಾಯಗಳನ್ನು ಕಂಡು ಹುಡುಕಿ ಕೋರ್ಟಿಗೆ ಮುಂದಿನ ತಿಂಗಳು 20 ತಾರೀಕಿಗೆ ತಿಳಿಸಬೇಕಾಗಿದೆ.

ಸುನೀತಾ ಕೃಷ್ಣನ್‌ರ “ಪ್ರಜ್ವಲ” ಎನ್ನುವಸಂಘಟನೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಬರೆದಿದ್ದ ಪತ್ರವನ್ನು ಕೋರ್ಟು ಪರಿಗಣಿಸಿತ್ತು. ಅತ್ಯಾಚಾರ ದೃಶ್ಯಗಳಿರುವ ಎರಡು ವೀಡಿಯೊಗಳನ್ನು ಪತ್ರದೊಂದಿಗೆ ಅಂದಿನ ಮುಖ್ಯನ್ಯಾಯಾಧೀಶ ಎಚ್.ಎಲ್. ದತ್ತುರಿಗೆ ಸಲ್ಲಿಸಲಾಗಿತ್ತು. ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟು ತನಿಖೆ ನಡೆಸಲು ಸಿಬಿಐಗೆ ಆದೇಶಿಸಿತ್ತು.

ಲೈಂಗಿಕ ಅಪರಾಧಕೃತ್ಯಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಸಂವಾದ ಭಾರತ ಮತ್ತು ಭಾರತದ ಹೊರಗೆ ಆರಂಭವಾಗಿದೆ ಎಂದು ಕೇಂದ್ರ ಸರಕಾರ ಕೋರ್ಟಿಗೆ ಈ ಹಿಂದೆ ತಿಳಿಸಿತ್ತು. ಇದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟು ಯಾವ ತೀರ್ಮಾನ ತೆಗೆದುಕೊಂಡರೂ ಜಾರಿಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟಿಗೆ ಕೇಂದ್ರಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News