​ಅಂಬ್ಲಮೊಗರು ಗ್ರಾಮಸಭೆ ರದ್ದು: ಜಿಪಂ ಸಿಇಒಗೆ ದೂರು

Update: 2017-03-23 11:35 GMT

ಮಂಗಳೂರು, ಮಾ.23: ಅಂಬ್ಲಮೊಗರು ಗ್ರಾಮಸಭೆಯನ್ನು ಕೆಲವು ಸದಸ್ಯರೇ ರದ್ದುಗೊಳಿಸಿರುವ ಕ್ರಮವನ್ನು ಖಂಡಿಸಿ ಮತ್ತು ಈ ಬಗ್ಗೆ ಸೂಕ್ತ ಕ್ರಮ ಜರಗಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಮದಕ ಘಟಕ ಮತ್ತು ಕಟ್ಟಡ-ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಯ ಅಂಬ್ಲಮೊಗರು ಘಟಕ ದ.ಕ.ಜಿಪಂ ಸಿಇಒಗೆ ದೂರು ನೀಡಿದೆ.

ಮಾ.13ರಂದು ಗ್ರಾಪಂನಲ್ಲಿ ಸಭೆ ಕರೆಯಲಾಗಿತ್ತು. ಅದರಂತೆ ಗ್ರಾಮದ ಜ್ವಲಂತ ಸಮಸ್ಯೆಯಾದ ನೀರು ಸಹಿತ ಮತ್ತಿತರ ವಿಷಯದ ಬಗ್ಗೆ ಗಮನ ಸೆಳೆಯಲು ಗ್ರಾಮಸ್ಥರು ಸಿದ್ಧರಾಗಿದ್ದರು. ಆದರೆ ಅಂದು ಗ್ರಾಮದ ಯಾವೊಬ್ಬ ಚುನಾಯಿತ ಸದಸ್ಯ ಹಾಜರಾಗದ ಕಾರಣ ಸಭೆ ರದ್ದಾಗಿದೆ.

ಹೀಗೆ ಸದಸ್ಯರಿಂದಾಗಿಯೇ ಸಭೆಯನ್ನು ರದ್ದುಗೊಳಿಸಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದು ಪ್ರಥಮವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಸಂಘಟನೆಯ ಪ್ರಮುಖರಾದ ಸಲೀಂ ಮದಕ ಮತ್ತು ಇಬ್ರಾಹೀಂ ಮದಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News