ಫೈವ್ ಸ್ಟಾರ್ ಗುಡ್ಡೆ ಅಡ್ಡೂರು ಬಳಗದಿಂದ ಸ್ವಚ್ಛತಾ ಅಭಿಯಾನ

Update: 2017-03-23 12:34 GMT

ಮಂಗಳೂರು, ಮಾ.23: 'ಸ್ವಚ್ಚ ಗ್ರಾಮ ಅಡ್ಡೂರು ಗ್ರಾಮ' ಎಂಬ ಗ್ರಾಮ ವ್ಯಾಪ್ತಿಯ ಅಭಿಯಾನವನ್ನು ಫೈವ್ ಸ್ಟಾರ್ ಗುಡ್ಡೆ ಅಡ್ಡೂರು ಬಳಗದವರು ಮಾ.15ರಂದು ಅಡ್ಡೂರಿನ ಕೇಂದ್ರ ಭಾಗವನ್ನು ಸ್ವಚ್ಚತೆ ಗೊಳಿಸುವ ಮೂಲಕ ಸ್ವಚ್ಚತಾ ಅಭಿಯಾನ ಪ್ರಾರಂಭಿಸಿದರು.

ಸ್ವಚ್ಚತ ಕಾರ್ಯಕ್ರಮದಲ್ಲಿ  ಪ್ರಥಮವಾಗಿ ಅಡ್ಡೂರು ಜಂಕ್ಷನ್ ನಿಂದ ಹಿಡಿದು-ಮೀನು ಮಾರ್ಕೆಟ್-ಜಂಕ್ಷನ್ ಮಸೀದಿ-ಸರಕಾರಿ ಶಾಲೆ ಬಳಿ-ಕೇಂದ್ರ ಮಸೀದಿ ಬಳಿ-ಅಲ್ಲಿಂದ ನೇರವಾಗಿ ಗುಡ್ಡೆ ಗರಡಿ ತನಕ ಸ್ವಚ್ಚತೆಯನ್ನು ಮಾಡಲಾಯಿತು. ತ್ಯಾಜ್ಯ ವಸ್ತುಗಳನ್ನು ತೆರವು ಗೂಳಿಸಲಾಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಡ್ಡೂರು ಗ್ರಾಮದ ಹಿರಿಯ ವ್ಯಕ್ತಿಗಳು ಬಂದು ಈ ಅಭಿಯಾನಕ್ಕೆ ಕೈ ಜೋಡಿಸಿದರು.

ವಿಷೇಷವಾಗಿ ಅಡ್ಡೂರು ಕೇಂದ್ರ ಜುಮಾ ಮಸೀದಿಯ ಖತೀಬರು ತಮ್ಮ ಕಾರ್ಯವನ್ನು ಅಭಿನಂದಿಸಿದರು. ಜುಮಾ ನಮಾಝಿನ ಬಳಿಕ ಈ ಯುವಕರಿಗೆ ದುಹಾ ಮಾಡುವ ಮೂಲಕ ಅಭಿನಂಧನೆಯನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News