ಉ.ಪ್ರ: 100ಕ್ಕೂ ಹೆಚ್ಚು ಪೊಲೀಸರ ಅಮಾನತು

Update: 2017-03-23 14:01 GMT

ಲಕ್ನೊ, ಮಾ.23: ಕರ್ತವ್ಯದಲ್ಲಿ ಅಸಡ್ಡೆ ತೋರಿದ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನು ಸರಕಾರ ಅಮಾನತುಗೊಳಿಸಿದೆ.

ಅಮಾನತುಗೊಂಡವರಲ್ಲಿ ಹೆಚ್ಚಿನವರು ಘಝಿಯಾಬಾದ್, ಮೀರತ್ ಮತ್ತು ನೋಯ್ಡಿದವರು. ಲಕ್ನೊದಲ್ಲಿ 7 ಇನ್‌ಸ್ಟೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರುತ್ತಿರುವ ಪೊಲೀಸರನ್ನು ಗುರುತಿಸುವಂತೆ ಡಿಜಿಪಿ ಜಾವೇದ್ ಅಹ್ಮದ್ ಕೆಲ ದಿನದ ಹಿಂದೆಯಷ್ಟೆ ನಿರ್ದೇಶನ ಹೊರಡಿಸಿದ್ದರು.

  ಈ ನಿರ್ದೇಶನದಂತೆ 100ಕ್ಕೂ ಹೆಚ್ಚು ಪೊಲೀಸರನ್ನು (ಹೆಚ್ಚಿನವರು ಕಾನ್‌ಸ್ಟೆಬಲ್‌ಗಳು) ಅಮಾನತುಗೊಳಿಸಲಾಗಿದೆ. ಇತರರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಇವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉ.ಪ್ರ.ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್ ಶ್ರೀವಾಸ್ತವ ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಕೆಲವೇ ಘಂಟೆಯ ಬಳಿಕ ರಾಜ್ಯದ ಎಲ್ಲಾ ಪೊಲೀಸ್ ಅಧೀಕ್ಷಕರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇಬಾಶಿಷ್ ಪಾಂಡ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News