ವೀಸಾ ಅರ್ಜಿ ತಪಾಸಣೆಗೆ ಕಠಿಣ ನಿಯಮ: ಟಿಲರ್‌ಸನ್ ಸೂಚನೆ

Update: 2017-03-23 14:57 GMT

ವಾಶಿಂಗ್ಟನ್, ಮಾ. 23: ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಸಮುದಾಯಗಳನ್ನು ಗುರುತಿಸಿ ಆ ಸಮುದಾಯಗಳಲ್ಲಿರುವ ವೀಸಾ ಅರ್ಜಿದಾರರ ತಪಾಸಣೆಯನ್ನು ಕಠಿಣಗೊಳಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಅಮೆರಿಕದ ರಾಯಭಾರಿ ಕಚೇರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಐಸಿಸ್ ನಿಯಂತ್ರಣದ ಭೂಭಾಗಗಳಲ್ಲಿ ಇರುವ ಅರ್ಜಿದಾರರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆಯೂ ಅವರು ಆದೇಶಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ ರಾಯಭಾರ ಕಚೇರಿಗಳಿಗೆ ಟಿಲರ್‌ಸನ್ ಕಳುಹಿಸಿದ ನಾಲ್ಕು ಕೇಬಲ್‌ಗಳು (ಸಂದೇಶಗಳು) ಈ ಸೂಚನೆಗಳನ್ನು ಒಳಗೊಂಡಿವೆ.

ಈ ಸಂದೇಶಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಮುಖ ಚುನಾವಣಾ ಆಶ್ವಾಸನೆಗೆ ಪೂರಕವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News