ಬೆಲ್ಜಿಯಂ: ಜನರ ಮೇಲೆ ಕಾರು ಚಲಾಯಿಸಲು ಯತ್ನಿಸಿದಾತನ ಬಂಧನ

Update: 2017-03-23 15:22 GMT

ಬ್ರಸೆಲ್ಸ್, ಮಾ. 23: ಬೆಲ್ಜಿಯಂನ ಬಂದರು ನಗರ ಆ್ಯಂಟ್‌ವರ್ಪ್‌ನಲ್ಲಿ ಗುಂಪೊಂದರ ಮೇಲೆ ಕಾರು ಚಲಾಯಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಗುರುವಾರ ಹೇಳಿದ್ದಾರೆ.

‘‘ಆತನ ಕಾರಿನಲ್ಲಿ ವಿಭಿನ್ನ ಶಸ್ತ್ರಗಳು ಪತ್ತೆಯಾಗಿವೆ. ಹರಿತ ಆಯುಧಗಳು, ರೈಫಲ್ ಮತ್ತು ದ್ರಾವಣವೊಂದರ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಫೆಡರಲ್ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆ್ಯಂಟ್‌ವರ್ಪ್‌ನಲ್ಲಿ ಗುರುವಾರ ಅಂಗಡಿ ಸಂಕೀರ್ಣವೊಂದರ ಬಳಿ ಅತಿ ವೇಗದಿಂದ ಗುಂಪಿನ ಮೇಲೆ ಕಾರು ಚಲಾಯಿಸಲು ಯತ್ನಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News