ಯುದ್ಧಾಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಲಂಕಾ ವಿಫಲ ; ವಿಶ್ವಸಂಸ್ಥೆ ಮಾನವಹಕ್ಕು ಮುಖ್ಯಸ್ಥರಿಂದ ತರಾಟೆ
Update: 2017-03-23 21:00 IST
ಜಿನೇವ, ಮಾ. 23: ಎಲ್ಟಿಟಿಇ ವಿರುದ್ಧದ ಯುದ್ಧದ ಅವಧಿಯಲ್ಲಿ ನಡೆಯಿತೆನ್ನಲಾದ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಶ್ರೀಲಂಕಾ ನಿರಂತರವಾಗಿ ವಿಫಲವಾಗುತ್ತಿರುವುದನ್ನು ವಿಶ್ವಸಂಸ್ಥೆಗಳ ಮಾನವಹಕ್ಕುಗಳ ಮುಖ್ಯಸ್ಥ ಝಾಯಿದ್ ರಅದ್ ಅಲ್ ಹುಸೈನ್ ಬುಧವಾರ ಖಂಡಿಸಿದ್ದಾರೆ.
37 ವರ್ಷಗಳ ಕಾಲ ನಡೆದ ಯುದ್ಧದ ಅವಧಿಯಲ್ಲಿ ನಡೆದ ಅಪರಾಧಗಳ ವಿಷಯದಲ್ಲಿ ವಿಶ್ವಸಂಸ್ಥೆ ಮತ್ತು ಶ್ರೀಲಂಕಾ ಸರಕಾರಗಳ ನಡುವೆ ನಡೆಯುತ್ತಿರುವ ವಾಕ್ಸಮರದ ಮುಂದುವರಿದ ಭಾಗ ಇದಾಗಿದೆ.
‘‘ಗಂಭೀರ ಅಪರಾಧಗಳ ಬಗ್ಗೆ ತನಿಖೆ ನಡೆಸಿ, ಅಪರಾಧಿಗಳನ್ನು ವಿಚಾರಣೆಗೆ ಗುರಿಪಡಿಸಿ ಶಿಕ್ಷೆ ವಿಧಿಸಲು ಶ್ರೀಲಂಕಾ ನಿರಂತರವಾಗಿ ವಿಫಲವಾಗುತ್ತಿದೆ. ಇದು ಸೈನಿಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರಕಾರ ಅನಾಸಕ್ತಿ ಅಥವಾ ಹೆದರಿಕೆಯನ್ನು ವ್ಯಕ್ತಪಡಿಸುತ್ತದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಮಾಡಿದ ಭಾಷಣದಲ್ಲಿ ಹುಸೈನ್ ಹೇಳಿದ್ದಾರೆ.