×
Ad

ಕೊಹ್ಲಿ ಸ್ಥಾನಕ್ಕೆಶ್ರೇಯಸ್ ಅಯ್ಯರ್‌ಗೆ ಬುಲಾವ್

Update: 2017-03-23 23:52 IST

ಮುಂಬೈ, ಮಾ.23: ಮುಂಬೈನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂಬರುವ ಧರ್ಮಶಾಲಾದಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಹಾಗೂ ಅಂತಿಮಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ರಾಂಚಿಯಲ್ಲಿ ಭುಜನೋವಿಗೆ ಒಳಗಾಗಿದ್ದ ಕೊಹ್ಲಿಯ ಸ್ಥಾನಕ್ಕೆ ಅಯ್ಯರ್‌ರನ್ನು ಆಯ್ಕೆ ಮಾಡಲಾಗಿದೆ. ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಕಳೆದ 3 ವರ್ಷಗಳಿಂದ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಅಯ್ಯರ್‌ಗೆ ಟೆಸ್ಟ್ ತಂಡ ಸೇರುವ ಭಾಗ್ಯ ಒಲಿದಿದೆ.

 ವಿರಾಟ್ ಕೊಹ್ಲಿ ಬಲಭುಜಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಗುರುವಾರ ಲಘು ಅಭ್ಯಾಸ ನಡೆಸಿದ್ದಾರೆ. ಕೆಳಗಿನಿಂದ ಚೆಂಡನ್ನು ಎಸೆದಿದ್ದ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಲಿಲ್ಲ. ಅಯ್ಯರ್ ಶುಕ್ರವಾರ ಬೆಳಗ್ಗೆ ಧರ್ಮಶಾಲಾದಲ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

 2015ರಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 2.6 ಕೋ.ರೂ.ಗೆ ಡೆಲ್ಲಿ ಡೇರ ಡೆವಿಲ್ಸ್ ತಂಡಕ್ಕೆ ಹರಾಜಾಗಿದ್ದ ಅಯ್ಯರ್ ಎಲ್ಲರ ಗಮನಸೆಳೆದಿದ್ದರು. ಆ ವರ್ಷ 14 ಪಂದ್ಯಗಳಲ್ಲಿ 439 ರನ್ ಗಳಿಸಿದ್ದರು. ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News