×
Ad

ಅಫ್ಘಾನ್‌ನಲ್ಲಿ ತಾಲಿಬಾನ್‌ಗೆ ಬೆಂಬಲ : ನ್ಯಾಟೊ ಆರೋಪ ನಿರಾಕರಿಸಿದ ರಶ್ಯ

Update: 2017-03-24 21:25 IST

ಮಾಸ್ಕೊ, ಮಾ. 24: ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ನ್ಯಾಟೊ ಪಡೆಗಳ ವಿರುದ್ಧ ಹೋರಾಡಲು ತಾಲಿಬಾನ್‌ಗೆ ರಶ್ಯ ನೆರವು ನೀಡುತ್ತಿರಬಹುದು ಎಂಬ ನ್ಯಾಟೊ ಕಮಾಂಡರ್‌ರ ಆರೋಪಗಳನ್ನು ರಶ್ಯ ಶುಕ್ರವಾರ ನಿರಾಕರಿಸಿದೆ.

‘‘ಈ ಆರೋಪ ಶುದ್ಧ ಸುಳ್ಳು’’ ಎಂದು ರಶ್ಯದ ವಿದೇಶ ಸಚಿವಾಲಯದಲ್ಲಿ ಅಫ್ಘಾನಿಸ್ತಾನದ ವ್ಯವಹಾರಗಳನ್ನ ನೋಡಿಕೊಳ್ಳುತ್ತಿರುವ ಇಲಾಖೆಯ ಮುಖ್ಯಸ್ಥ ಝಮೀರ್ ಕಬುಲೊವ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದರು.

ಅಫ್ಘಾನಿಸ್ತಾನ ಸೇರಿದಂತೆ ಹಲವು ವಲಯಗಳಲ್ಲಿ ರಶ್ಯದ ಪ್ರಭಾವ ಹೆಚ್ಚುತ್ತಿರುವುದನ್ನು ತಾನು ನೋಡಿದ್ದೇನೆ ಎಂದು ನ್ಯಾಟೋದ ಸುಪ್ರೀಂ ಅಲೈಡ್ ಕಮಾಂಡರ್ ಹಾಗೂ ಅಮೆರಿಕದ ಜನರಲ್ ಕರ್ಟಿಸ್ ಸ್ಕಾಪರೋಟಿ ಗುರುವಾರ ವಾಶಿಂಗ್ಟನ್‌ನಲ್ಲಿ ಸಂಸದರಿಗೆ ಮಾಹಿತಿ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News