×
Ad

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ: ಗೌರಿ ಖಾನ್, ಕೆಕೆಆರ್‌ಗೆ ನೋಟಿಸ್ ಜಾರಿ

Update: 2017-03-25 20:22 IST

  ಹೊಸದಿಲ್ಲಿ, ಮಾ.25: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮತ್ತು ಕೋಲ್ಕತಾ ನೈಟ್‌ರೈಡರ್ಸ್ ಸ್ಪೋರ್ಟ್ಸ್ ಪ್ರೈ.ಲಿ. (ಕೆಆರ್‌ಎಸ್‌ಪಿಎಲ್) ವಿರುದ್ಧ ಜಾರಿ ನಿರ್ದೇಶಾನಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಜೂಹಿ ಚಾವ್ಲಾ ಮತ್ತವರ ಪತಿ ಜೇ ಮೆಹ್ತಾ ಅವರು ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್‌ನ ಸಹ ಮಾಲಕರಾಗಿದ್ದಾರೆ. ಈ ತಂಡದ ಶೇರುಗಳನ್ನು 2008ರಲ್ಲಿ ಜೇ ಮೆಹ್ತಾ ಒಡೆತನದ ಸೀ ಐಲ್ಯಾಂಡ್ ಇನ್‌ವೆಸ್ಟ್ ಸಂಸ್ಥೆಗೆ ವರ್ಗಾಯಿಸಲಾಗಿದ್ದು ಈ ಪ್ರಕ್ರಿಯೆಯಲ್ಲಿ 73.6 ಕೋಟಿ ರೂ.ಗಳಷ್ಟು ವಿದೇಶಿ ವಿನಿಮಯ ನಷ್ಟವಾಗಿದೆ ಎಂದು 2014ರಲ್ಲಿ ನಡೆಸಲಾದ ಆಡಿಟಿಂಗ್(ಲೆಕ್ಕಪತ್ರ ತಪಾಸಣೆ) ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News