×
Ad

ಅನುಪಮ್‌ ಖೇರ್‌ಗೆ ಕಲಾರತನ್ ಪ್ರಶಸ್ತಿ

Update: 2017-03-25 21:23 IST

     ಮುಂಬೈ,ಮಾ.25: ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಕಲಾರತನ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ ಅನುಪಮ್ ಖೇರ್ ಅವರಿಗೆ ಪ್ರದಾನ ಮಾಡಿದ್ದಾರೆ.

62 ವರ್ಷ ವಯಸ್ಸಿನ ಅನುಪಮ್ ಖೇರ್‌ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿ ‘‘ 1974ರಲ್ಲಿ ನಾನು ಭಾರತದ ರಂಗಭೂಮಿಗೆ ಸೇರ್ಪಡೆಗೊಂಡೆ. ಇದು ನಾನು ಕಲಾರತನ್ ಪ್ರಶಸ್ತಿಯನ್ನು ಪಡೆಯುತ್ತಿದ್ದೇನೆಂದು ಹೇಳಲು ಹೆಮ್ಮೆಯಾಗುತ್ತಿದೆ’’ ಎಂದು ತಿಳಿಸಿದ್ದಾರೆ.

  ಸಿನೆಮಾ ಹಾಗೂ ಕಲಾಕ್ಷೇತ್ರಕ್ಕೆೆ ನೀಡಿದ ಅನನ್ಯವಾದ ಕೊಡುಗೆಗಾಗಿ ಖೇರ್ ಅವರಿಗೆ 2004ರಲ್ಲಿಪದ್ಮಶ್ರೀ ಹಾಗೂ 2016ರಲ್ಲಿ ಪದ್ಮಭೂಷಣ್ ಪುರಸ್ಕಾರಗಳು ದೊರೆತಿದ್ದವು. ಸಾರಾಂಶ್, ಕರ್ಮ ಸೇರಿದಂತೆ ಹಲವಾರು ಯಶಸ್ವಿ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅನುಪಮ್‌ಖೇರ್, ‘ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಮ್’, ‘ಲಸ್ಟ್, ಕಾಶನ್’ ಮತ್ತು 2013ರ ಆಸ್ಕರ್ ವಿಜೇತ ಚಿತ್ರ ‘ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್’ನಲ್ಲಿಯೂ ಅಭಿನಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News