ಹುಡುಗಿಯರು ಲೆಗ್ಗಿಂನ್ಸ್ ಧರಿಸಿ ಬಂದದ್ದಕ್ಕೆ ಪ್ರಯಾಣಕ್ಕೆ ಅನುಮತಿ ನೀಡದ ವಿಮಾನ ಕಂಪೆನಿ !
ವಾಷಿಂಗ್ಟನ್, ಮಾ. 27: ಲೆಗ್ಗಿಂನ್ಸ್ ಧರಿಸಿ ಬಂದಿದ್ದ ಹೆಣ್ಣುಮಕ್ಕಳು ವಿಮಾನದಲ್ಲಿ ಪ್ರಯಾಣಿಸದಂತೆ ಯುನೈಟೆಡ್ ಏರ್‌ಲೈನ್ಸ್ ತಡೆದಿದ್ದು, ವಿಮಾನ ಕಂಪೆನಿಯ ಈ ಕ್ರಮವನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಘಟನೆ ರವಿವಾರ ನಡೆದಿದೆ. ಡೆನ್‌ವರ್‌ನಿಂದ ಮಿನೆಪೊಲಿಸಿಗೆ ಹೋಗುವ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಹೋಗಲಿಕ್ಕಾಗಿ ಲೆಗ್ಗಿಂನ್ಸ್ ಧರಿಸಿ ಬಂದಿದ್ದ ಐವರು ಹೆಣ್ಣುಮಕ್ಕಳನ್ನು ವಿಮಾನ ಕಂಪೆನಿ ತಡೆಹಿಡಿದಿತ್ತು.
ಲೆಗ್ಗಿಂನ್ಸ್ ಬದಲಿಸಬೇಕು ಅಥವಾ ಅದರ ಮೇಲೆ ಬೇರೆ ಬಟ್ಟೆ ಧರಿಸಬೇಕು. ಹಾಗಿದ್ದರೆ ಮಾತ್ರವೇ ನೀವು ವಿಮಾನದಲ್ಲಿ ಪ್ರಯಾಣಿಸಬಹುದುಎಂದು ವಿಮಾನ ಕಂಪೆನಿ ಹುಡುಗಿಯರಿಗೆ ತಾಕೀತು ಮಾಡಿದೆ. ಆನಂತರ ಐವರು ಹೆಣ್ಣುಮಕ್ಕಳಲ್ಲಿ ಮೂವರು ಹೆಣ್ಣು ಬಟ್ಟೆಬದಲಾಯಿಸಿಬೇರೆ ಬಟ್ಟೆಧರಿಸಿದ್ದಾರೆ. ಆದರೆ ಹತ್ತುವರ್ಷದ ಬಾಲಕಿ ಮತ್ತು ಇನ್ನೊಬ್ಬಳು ಬೇರೆ ಬಟ್ಟೆಧರಿಸಲು ಒಪ್ಪಲಿಲ್ಲ.ಆದ್ದರಿಂದ ಅವರಿಬ್ಬರನ್ನು ವಿಮಾನಕ್ಕೆ ಹತ್ತದಂತೆ ಅಧಿಕಾರಿಗಳು ತಡೆದಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಿಲ್ಲ.
ಶಾನಲ್ ವಾಟ್ಸ್ ಎಂಬವರು ಈ ವಿಷಯವನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಆ ನಂತರ ಏರ್‌ಲೈನ್ಸ್ ವಿರುದ್ಧ ಭಾರೀ ಪ್ರತಿಭಟನೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗಿದೆ. ಆದರೆ ಹೆಣ್ಣುಮಕ್ಕಳ ಕೈಯಲ್ಲಿ ಡ್ರೆಸ್‌ಕೋಡ್ ನಿಬಂಧನೆ ಇದ್ದ ಪ್ರಯಾಣಿಕಟಿಕೆಟ್ ಆಗಿತ್ತು ಎಂದು ವಿಮಾನ ಕಂಪೆನಿ ತಿಳಿಸಿದೆ. ಈ ಮಕ್ಕಳ ಕೈಯಲ್ಲಿ ಕಂಪೆನಿಯ ಉದ್ಯೋಗಿಗಳು ಅಥವಾ ಅವರ ಆಶ್ರಿತರು ಪ್ರಯಾಣಿಸುವ ಯುನೈಟೆಡ್ ಪಾಸ್ ಟ್ರಾವಲರ್ ಟಿಕೆಟ್ ಇತ್ತು. ಅದರಲ್ಲಿ ವಸ್ತ್ರಧಾರಣೆಯ ನಿಬಂಧನೆಗಳಿವೆ. ಆದ್ದರಿಂದ ಹೆಣ್ಣುಮಕ್ಕಳಲ್ಲಿ ನಾವು ಬಟ್ಟೆ ಬದಲಾಯಿಸಿ ಬರಲು ಹೇಳಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ವಿಮಾನಕಂಪೆನಿ ಈವರೆಗೂ ಈ ಕುರಿತು ಅಧಿಕೃತ ಸ್ಪಷ್ಟೀಕರಣ ನೀಡಿಲ್ಲ.