×
Ad

ಅಂತಿಮ ಟೆಸ್ಟ್‌ನಲ್ಲಿ ಭಾರತದ ಗೆಲುವಿಗೆ ಕೇವಲ 87 ರನ್ ಅಗತ್ಯ

Update: 2017-03-27 17:28 IST

    ಧರ್ಮಶಾಲಾ, ಮಾ.27: ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ದು, ಇನ್ನು ಕೇವಲ 87 ರನ್ ಗಳಿಸಬೇಕಿದೆ.

ಇದರೊಂದಿಗೆ ಭಾರತ ನಾಲ್ಕು ಟೆಸ್ಟ್‌ಗಳ ಸರಣಿಯನ್ನು 2-1 ಅಂತರದಲ್ಲಿ ಗೆಲ್ಲುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ.
  ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎರಡನೆ ಇನಿಂಗ್ಸ್‌ನಲ್ಲಿ ಕೇವಲ 137 ರನ್‌ಗಳಿಗೆ ನಿಯಂತ್ರಿಸಿ ಗೆಲ್ಲಲು ಎರಡನೆ ಇನಿಂಗ್ಸ್‌ನಲ್ಲಿ 106 ರನ್‌ಗಳ ಸವಾಲನ್ನು ಪಡೆದಿರುವ ಭಾರತ ಮೂರನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ.
ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್ 13 ರನ್ ಮತ್ತು ಮುರಳಿ ವಿಜಯ್ 6 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ 32 ರನ್‌ಗಳ ಮುನ್ನಡೆ ಸಾಧಿಸಿ ಗೆಲುವಿಗೆ ಸುಲಭದ ಸವಾಲು ಪಡೆದಿರುವ ಭಾರತ ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಮಂಗಳವಾರ ಸರಣಿ ಗೆಲುವನ್ನು ದೃಢಪಡಿಸಲಿದೆ.

  137 ರನ್‌ಗಳಿಗೆ ಆಸ್ಟ್ರೇಲಿಯ ಆಲೌಟ್: ಮೊದಲ ಇನಿಂಗ್ಸ್‌ನಲ್ಲಿ 32 ರನ್‌ಗಳ ಹಿನ್ನಡೆ ಅನುಭವಿಸಿದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳಾದ ಉಮೇಶ್ ಯಾದವ್, ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ದಾಳಿಗೆ ಸಿಲುಕಿ 53.5 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟಾಗಿದೆ. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 45 ರನ್ ಗಳಿಸಿರುವುದು ತಂಡದ ಪರ ದಾಖಲಾಗಿರುವ ಗರಿಷ್ಠ ಸ್ಕೋರ್ ಆಗಿದೆ. ಮ್ಯಾಕ್ಸ್‌ವೆಲ್ ಮತ್ತು ಹ್ಯಾಂಡ್ಸ್‌ಕಂಬ್ ನಾಲ್ಕನೆ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದ್ದರು. ಇದು ಆಸ್ಟ್ರೇಲಿಯದ ಪರ ಎರಡನೆ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ.

ಆಸ್ಟ್ರೇಲಿಯ ಮೊದಲ 3 ಓವರ್‌ಗಳಲ್ಲಿ 10 ರನ್ ಗಳಿಸಿತ್ತು. 4ನೆ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಔಟಾಗುವುದರೊಂದಿಗೆ ಆಸ್ಟ್ರೇಲಿಯದ ಮೊದಲ ವಿಕೆಟ್ ಪತನಗೊಂಡಿತು. ವಾರ್ನರ್ (6) ಅವರು ಯಾದವ್ ಎಸೆತದಲ್ಲಿ ವೃದ್ಧಿಮಾನ್ ಸಹಾಗೆ ಕ್ಯಾಚ್ ನೀಡಿದರು. ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು. ಎರಡನೆ ಇನಿಂಗ್ಸ್‌ನಲ್ಲಿ 17 ರನ್ ಗಳಿಸಿ ಭುವನೇಶ್ವರ ಕುಮಾರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.ರೆನ್‌ಶಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ತಳವೂರಿ 33 ಎಸೆತಗಳನ್ನು ಎದುರಿಸಿದ್ದರೂ ಗಳಿಸಿದ್ದು 8ರನ್. ಚೆಂಡನ್ನು ಎರಡು ಬಾರಿ ಬೌಂಡರಿಗಟ್ಟಿ 8 ರನ್ ಜಮೆ ಮಾಡಿದ್ದರು.ಹ್ಯಾಂಡ್ಸ್‌ಕಂಬ್ 18 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.

26ನೆ ಓವರ್‌ನ ಮೂರನೆ ಎಸೆತದಲ್ಲಿ ಶಾನ್ ಮಾರ್ಷ್ (1) ಅವರು ಜಡೇಜಗೆ ವಿಕೆಟ್ ಒಪ್ಪಿಸಿದರು. 92 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯ ಬಳಿಕ 45 ರನ್ ಸೇರಿಸುವ ಹೊತ್ತಿಗೆ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡು ಎರಡನೆ ಇನಿಂಗ್ಸ್‌ನ್ನು ಮುಗಿಸಿತು. 33ನೆ ಓವರ್‌ನ 3ನೆ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 60 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು.
ಪ್ಯಾಟ್ ಕಮಿನ್ಸ್ 12 ರನ್ ಗಳಿಸಿ ಔಟಾದರು. ಬಳಿಕ ಓ’ಕೀಫೆ(0), ಲಿಯೊನ್(0) ಮತ್ತು ಹೇಝಲ್‌ವುಡ್(0) ಖಾತೆ ತೆರೆಯದೆ ಪೆವಿಲಿಯನ್ ಸೇರುವುದರೊಂದಿಗೆ ಆಸ್ಟ್ರೇಲಿಯದ ಎರಡನೆ ಇನಿಂಗ್ಸ್ ಮುಕ್ತಾಯಗೊಂಡಿತು. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಔಟಾಗದೆ 25 ರನ್(90ಎ, 2ಬೌ,1ಸಿ) ಗಳಿಸಿದರು.

ಭಾರತ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ 24ಕ್ಕೆ 3, ರವಿಚಂದ್ರನ್ ಅಶ್ವಿನ್ 29ಕ್ಕೆ 3, ವೇಗದ ಬೌಲರ್‌ಗಳಾದ ಉಮೇಶ್ ಯಾದವ್ 29ಕ್ಕೆ 3 ಮತ್ತು ಭುವನೇಶ್ವರ ಕುಮಾರ್ 27ಕ್ಕೆ 1 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಚೊಚ್ಚಲ ಟೆಸ್ಟ್ ಆಡುತ್ತಿರುವ ಕುಲದೀಪ್ ಯಾದವ್‌ಗೆ ವಿಕೆಟ್ ಸಿಗಲಿಲ್ಲ. ಭಾರತಕ್ಕೆ 32 ರನ್ ಮುನ್ನಡೆ:
 ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 300 ರನ್‌ಗಳಿಗೆ ಆಲೌಟಾಗಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 332ರನ್‌ಗಳಿಗೆ ಆಲೌಟಾಗುವುದರೊಂದಿಗೆ 32 ರನ್‌ಗಳ ಮೇಲುಗೈ ಸಾಧಿಸಿತ್ತು.
ಎರಡನೆ ದಿನದಾಟದಂತ್ಯಕ್ಕೆ 91 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 248 ರನ್ ಗಳಿಸಿದ್ದ ಭಾರತ ಇಂದು ಆಟ ಮುಂದುವರಿಸಿ ಈ ಮೊತ್ತಕ್ಕೆ 84 ರನ್ ಸೇರಿಸಿತು.

 ವೃದ್ಧಿಮಾನ್ ಸಹಾ ಮತ್ತು ರವೀಂದ್ರ ಜಡೇಜ ಬ್ಯಾಟಿಂಗ್ ಮುಂದುವರಿಸಿ 7ನೆ ವಿಕೆಟ್‌ಗೆ ಭಾರತದ ಖಾತೆಗೆ 97 ರನ್‌ಗಳನ್ನು ಸೇರಿಸಿದರು. ಜಡೇಜ 63 ರನ್ ಮತ್ತು ಸಹಾ 31 ರನ್ ಗಳಿಸಿ ಔಟಾದರು. ಭುವನೇಶ್ವರ ಕುಮಾರ್ (0) ಖಾತೆ ತೆರೆಯಲಿಲ್ಲ. ಕುಲದೀಪ್ ಯಾದವ್ 7 ರನ್ ಗಳಿಸಿ ಔಟಾದರು. ಉಮೇಶ್ ಯಾದವ್ ಔಟಾಗದೆ 2 ರನ್ ಗಳಿಸಿದರು.

ಆಸ್ಟ್ರೇಲಿಯದ ನಥಾನ್ ಲಿಯೊನ್ 92ಕ್ಕೆ 5, ಕಮಿನ್ಸ್ 94ಕ್ಕೆ 3, ಹೇಝಲ್‌ವುಡ್ ಮತ್ತು ಓ’ಕೀಫೆ ತಲಾ 1 ವಿಕೆಟ್ ಹಂಚಿಕೊಂಡರು.

,,,,,,,,,
ಜಡೇಜ 7ನೆ ಅರ್ಧಶತಕ
ಧರ್ಮಶಾಲಾ, ಮಾ.27: ವಿಶ್ವದ ನಂ.1 ಬೌಲರ್ ಆಗಿರುವ ರವೀಂದ್ರ ಜಡೇಜ ಅವರು ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ 7ನೆ ಅರ್ಧಶತಕ ದಾಖಲಿಸಿದ್ದಾರೆ
 ರವಿವಾರ ದಿನದಾಟದಂತ್ಯಕ್ಕೆ ಸಹಾ 10ರನ್ ಮತ್ತು ಜಡೇಜ 16 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಜಡೇಜ ಇಂದು ಮೊದಲ ಓವರ್‌ನಲ್ಲಿ ಔಟಾಗುವ ಅವಕಾಶದಿಂದ ಪಾರಾಗಿದ್ದರು. ಅವರು 83 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಟೆಸ್ಟ್‌ನಲ್ಲಿ 7ನೆ ಅರ್ಧ ಶತಕ ದಾಖಲಿಸಿದರು. ಜಡೇಜ ಈ ವರೆಗೆ 29 ಟೆಸ್ಟ್‌ಗಳನ್ನು ಆಡಿದ್ದರೂ, ಅವರಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ. 30ನೆ ಟೆಸ್ಟ್‌ನಲ್ಲಿ ಜಡೇಜ 63 ರನ್ (95ಎ, 4ಬೌ, 4ಸಿ) ಗಳಿಸಿ ಔಟಾದರು.
 
ರಾಂಚಿಯಲ್ಲಿ ಮೂರನೆ ಟೆಸ್ಟ್‌ನಲ್ಲಿ ಜಡೇಜ ಔಟಾಗದೆ 54 ರನ್ ಗಳಿಸಿದ್ದರು ಎರಡೂ ಇನಿಂಗ್ಸ್ ಗಳಲ್ಲಿ 9 ವಿಕೆಟ್ ಪಡೆದಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ 7 ವಿಕೆಟ್ ಮತ್ತು 5ರನ್, ಪುಣೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 5 ವಿಕೆಟ್ ಮತ್ತು 5 ರನ್ ಗಳಿಸಿದ್ದರು. ಇದೀಗ ಅಂತಿಮ ಟೆಸ್ಟ್‌ನಲ್ಲಿ ಒಟ್ಟು 4 ವಿಕೆಟ್ ಪಡೆದಿದ್ದಾರೆ. ಸರಣಿಯ 4 ಟೆಸ್ಟ್‌ಗಳಲ್ಲಿ ಅವರು ಒಟ್ಟು 25 ವಿಕೆಟ್‌ಗಳನ್ನು ಪಡೆದು ಸರಣಿಯಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಬೌಲರ್‌ಗಳ ಪೈಕಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ 21 ವಿಕೆಟ್ ಪಡೆದಿದ್ದಾರೆ.

ಸ್ಕೋರ್ ಪಟ್ಟಿ

ಆಸ್ಟ್ರೇಲಿಯ ಮೊದಲ ಇನಿಂಗ್ಸ್ 118.1ಓವರ್‌ಗಳಲ್ಲಿ ಆಲೌಟ್ 300
 ಭಾರತ ಮೊದಲ ಇನಿಂಗ್ಸ್ 91 ಓವರ್‌ಗಳಲ್ಲಿ 248/6
    ರಾಹುಲ್ ಸಿ ವಾರ್ನರ್ ಬಿ ಬಿ ಕಮಿನ್ಸ್            60
    ವಿಜಯ್ ಸಿ ವೇಡ್ ಬಿ ಹೇಝಲ್‌ವುಡ್             11
    ಪೂಜಾರ ಸಿ ಹ್ಯಾಂಡ್ಸ್‌ಕಂಬ್ ಬಿ ಲಿಯೊನ್         57
                ರಹಾನೆಸಿ ಸ್ಮಿತ್ ಬಿ ಲಿಯೊನ್          46
        ಕೆ.ಕೆ.ನಾಯರ್ ಸಿ ವೇಡ್ ಬಿ ಲಿಯೊನ್         05
        ಆರ್.ಅಶ್ವಿನ್ ಎಲ್‌ಬಿಡಬ್ಲು ಬಿ ಲಿಯೊನ್       30
        ವೃದ್ಧಿಮಾನ್ ಸಹಾ ಸಿ ಸ್ಮಿತ್ ಬಿ ಕಮಿನ್ಸ್     31
            ರವೀಂದ್ರ ಜಡೇಜ ಬಿ ಕಮಿನ್ಸ್            63
        ಬಿ.ಕುಮಾರ್ ಸಿ ಸ್ಮಿತ್ ಬಿ ಓ’ಕೀಫೆ          00
     ಕುಲದೀಪ್ ಬಿ ಹೇಝಲ್‌ವುಡ್ ಬಿ ಲಿಯೊನ್   07
              
                    ಉಮೇಶ್ ಯಾದವ್ ಔಟಾಗದೆ 02

ಇತರೆ 20
ವಿಕೆಟ್ ಪತನ: 1-21, 2-108, 3-157, 4-167, 5-216, 6-221, 7-317, 8-318, 9-318, 10-332
ಬೌಲಿಂಗ್ ವಿವರ
        ಹೇಝಲ್‌ವುಡ್          25.0-8-51-1
            ಕಮಿನ್ಸ್              30.0-8-94-3
        ಲಿಯೊನ್                 34.1-5-92-5
            ಓ’ಕೀಫೆ               27.0-4-75-1
        ಮ್ಯಾಕ್ಸ್‌ವೆಲ್              02.0-0-05-0
 ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 53.5 ಓವರ್‌ಗಳಲ್ಲಿ ಆಲೌಟ್ 137
        ರೆನ್‌ಶಾ ಸಿ ಸಹಾ ಬಿ ಯಾದವ್          08
    ವಾರ್ನರ್ ಸಿ ಸಹಾ ಬಿ ಯಾದವ್              06
            ಸ್ಮಿತ್ ಬಿ ಕುಮಾರ್                     17
     ಹ್ಯಾಂಡ್ಸ್‌ಕಂಬ್ ಸಿ ರಹಾನೆ ಬಿ ಅಶ್ವಿನ್       18
        
     ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲು ಬಿ ಅಶ್ವಿನ್       45

ಎಸ್. ಮಾರ್ಷ್ ಸಿ ಪೂಜಾರ ಬಿ ಜಡೇಜ        01
    ವೇಡ್ ಔಟಾಗದೆ                              25

ಕಮಿನ್ಸ್ ಸಿ ರಹಾನೆ ಬಿ ಜಡೇಜ                 12

    ಓ’ ಕೇಫೆ ಸಿ ಪೂಜಾರ ಬಿ ಜಡೇಜ         00
    ಲಿಯೊನ್ ಸಿ ವಿಜಯ್ ಬಿ ಯಾದವ್        00
    ಹೇಝಲ್‌ವುಡ್ ಎಲ್‌ಬಿಡಬ್ಲು ಬಿ ಅಶ್ವಿನ್          00
                ಇತರೆ                                  05
ವಿಕೆಟ್ ಪತನ: 1-10, 2-31, 3-31, 4-87, 5-92, 6-106, 7-121, 8-121, 9-12210-137
ಬೌಲಿಂಗ್ ವಿವರ
        ಬಿ.ಕುಮಾರ್                   07.0-1-27-1
        ಯು.ಯಾದವ್                10.0-3-29-3
    ಕುಲದೀಪ್ ಯಾದವ್             05.0-0-23-0
            ಜಡೇಜ                   18.0-7-24-3
            ಅಶ್ವಿನ್                    13.5-4-29-3

 ಭಾರತ ಎರಡನೆ ಇನಿಂಗ್ಸ್ 6 ಔವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19
   ರಾಹುಲ್ ಔಟಾಗದೆ                 13
   ವಿಜಯ್ ಔಟಾಗದೆ                 06
            ಇತರೆ              00
ಬೌಲಿಂಗ್‌ವಿವರ
   ಕಮಿನ್ಸ್                   3-1-14-0
 ಹೇಝಲ್‌ವುಡ್             2-0-05-0
  ಓ’ಕೀಫೆ                    1-1-00-0

ಅಂಕಿ-ಅಂಶ

06: ರವೀಂದ್ರ ಜಡೇಜ ಈ ಋತುವಿನಲ್ಲಿ ಆರು ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ, ಎಂ.ವಿಜಯ್ ಹಾಗೂ ಕೆ,ಎಲ್, ರಾಹುಲ್ ದಾಖಲೆ ಸರಿಗಟ್ಟಿದರು. ಚೇತೇಶ್ವರ ಪೂಜಾರ(12) ಈ ಋತುವಿನಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ.

03: ಜಡೇಜ ಒಂದೇ ಋತುವಿನಲ್ಲಿ 500ಕ್ಕೂ ಅಧಿಕ ರನ್ ಹಾಗೂ 50ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಮೂರನೆ ಆಟಗಾರನಾಗಿದ್ದಾರೆ. 1979-80ರಲ್ಲಿ ಕಪಿಲ್‌ದೇವ್, 2008-09ರಲ್ಲಿ ಆಸೀಸ್‌ನ ಮಿಚೆಲ್ ಜಾನ್ಸನ್ ಈ ಸಾಧನೆ ಮಾಡಿದ್ದರು. ಜಡೇಜ 13 ಪಂದ್ಯಗಳಲ್ಲಿ 556 ರನ್ ಹಾಗೂ 71 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

17: ಉಮೇಶ್ ಯಾದವ್ ಪ್ರಸ್ತುತ ಸರಣಿಯಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಸರಣಿಯಲ್ಲಿ ಯಾದವ್‌ರ ಶ್ರೇಷ್ಠ ಸಾಧನೆ. 2011-12ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು.

64: ನಥಾನ್ ಲಿಯೊನ್ ಭಾರತದ ವಿರುದ್ಧ ಒಟ್ಟು 64 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುತ್ತಯ್ಯ ಮುರಳೀಧರನ್(105) ಬಳಿಕ ಭಾರತ ವಿರುದ್ಧ ಗರಿಷ್ಠ ವಿಕೆಟ್ ಪಡೆದ ಎರಡನೆ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. 05: ಲಿಯೊನ್ ಭಾರತ ವಿರುದ್ಧ ಆಡಿರುವ 14ನೆ ಪಂದ್ಯದಲ್ಲಿ 5ನೆ ಬಾರಿ 5 ವಿಕೆಟ್ ಗೊಂಚಲು ಪಡೆದರು.

06: ರವೀಂದ್ರ ಜಡೇಜ ಈ ಋತುವಿನಲ್ಲಿ ಆರು ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ, ಎಂ.ವಿಜಯ್ ಹಾಗೂ ಕೆ,ಎಲ್, ರಾಹುಲ್ ದಾಖಲೆ ಸರಿಗಟ್ಟಿದರು. ಚೇತೇಶ್ವರ ಪೂಜಾರ(12) ಈ ಋತುವಿನಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ.

03: ಜಡೇಜ ಒಂದೇ ಋತುವಿನಲ್ಲಿ 500ಕ್ಕೂ ಅಧಿಕ ರನ್ ಹಾಗೂ 50ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಮೂರನೆ ಆಟಗಾರನಾಗಿದ್ದಾರೆ. 1979-80ರಲ್ಲಿ ಕಪಿಲ್‌ದೇವ್, 2008-09ರಲ್ಲಿ ಆಸೀಸ್‌ನ ಮಿಚೆಲ್ ಜಾನ್ಸನ್ ಈ ಸಾಧನೆ ಮಾಡಿದ್ದರು. ಜಡೇಜ 13 ಪಂದ್ಯಗಳಲ್ಲಿ 556 ರನ್ ಹಾಗೂ 71 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

17: ಉಮೇಶ್ ಯಾದವ್ ಪ್ರಸ್ತುತ ಸರಣಿಯಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಸರಣಿಯಲ್ಲಿ ಯಾದವ್‌ರ ಶ್ರೇಷ್ಠ ಸಾಧನೆ. 2011-12ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು.

64: ನಥಾನ್ ಲಿಯೊನ್ ಭಾರತದ ವಿರುದ್ಧ ಒಟ್ಟು 64 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುತ್ತಯ್ಯ ಮುರಳೀಧರನ್(105) ಬಳಿಕ ಭಾರತ ವಿರುದ್ಧ ಗರಿಷ್ಠ ವಿಕೆಟ್ ಪಡೆದ ಎರಡನೆ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. 05: ಲಿಯೊನ್ ಭಾರತ ವಿರುದ್ಧ ಆಡಿರುವ 14ನೆ ಪಂದ್ಯದಲ್ಲಿ 5ನೆ ಬಾರಿ 5 ವಿಕೆಟ್ ಗೊಂಚಲು ಪಡೆದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News