×
Ad

ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂ

Update: 2017-03-27 20:22 IST

ಹೊಸದಿಲ್ಲಿ, ಮಾ.27: ಗರ್ಭದಲ್ಲಿರುವ ಭ್ರೂಣದಲ್ಲಿ ತೀವ್ರ ದೈಹಿಕ ಅಸಮಂಜತೆ ಇರುವ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂಬ ಮಹಿಳೆಯೋರ್ವರ ಕೋರಿಕೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

 27 ವಾರಗಳ ಭ್ರೂಣದಲ್ಲಿ ತೀವ್ರ ದೈಹಿಕ ಅಸಮಂಜತೆ ಇರುವುದಾಗಿ ಮುಂಬೈಯ ಕೆಇಎಂ ಆಸ್ಪತ್ರೆಯ ವೈದ್ಯಕೀಯ ಮಂಡಳಿ ವರದಿ ನೀಡಿದ ಹಿನ್ನೆಲೆಯಲ್ಲಿ ಮಹಿಳೆ ಗರ್ಭಪಾತಕ್ಕೆ ಅನುಮತಿ ಕೋರಿದ್ದರು. ಆದರೆ ಈಗ ಗರ್ಭಪಾತ ಮಾಡಿದರೆ , ಮಗು ಜೀವಂತವಾಗಿ ಹೊರಬರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ ಕಾರಣ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿರುವುದಾಗಿ ನ್ಯಾಯಾಲಯ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News