×
Ad

ಪ್ರಚಂಡ ಜಯ: ಮೋದಿಯನ್ನು ಅಭಿನಂದಿಸಿದ ಟ್ರಂಪ್

Update: 2017-03-28 09:14 IST

ವಾಷಿಂಗ್ಟನ್, ಮಾ.28: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಸಾಧಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ. ಟ್ರಂಪ್, ಮೋದಿಯವರನ್ನು ಮತ್ತು ಜರ್ಮನಿಯ ಚಾನ್ಸ್‌ಲರ್ ಅಂಜೆಲಾ ಮರ್ಕೆಲ್ ಅವರನ್ನು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಇಯಾನ್ ಸ್ಪೈಸರ್ ಪ್ರಕಟಿಸಿದ್ದಾರೆ.

 "ಅಧ್ಯಕ್ಷರು ಉಭಯ ಮುಖಂಡರಿಗೆ ಕರೆ ಮಾಡಿ, ಚುನಾವಣಾ ಜಯಕ್ಕಾಗಿ ಅಭಿನಂದಿಸಿದ್ದಾರೆ" ಎಂದು ಸ್ಪೈಸರ್ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉತ್ತರ ಪ್ರದೇಶ, ಉತ್ತರಾಖಂಡ, ಗೊವಾ ಹಾಗೂ ಮಣಿಪುರದಲ್ಲಿ ಅಧಿಕಾರ ಹಿಡಿದಿದ್ದರೆ, ಪಂಜಾಬ್‌ನಲ್ಲಿ ಸೋಲು ಅನುಭವಿಸಿದೆ. ಅಧಿಕ ಮೌಲ್ಯದ ನೋಟುಗಳನ್ನು ರದ್ದುಪಡಿಸಿದ ಬಳಿಕ ನಡೆದ ಮೊದಲ ಚುನಾವಣೆಯನ್ನು ಕೇಂದ್ರದ ಪಾಲಿನ ಜನಮತಗಣನೆ ಎಂದೇ ವಿಶ್ಲೇಷಿಸಲಾಗಿತ್ತು.

ಇದಕ್ಕೂ ಮುನ್ನ ಟ್ರಂಪ್ ಹಾಗೂ ಮೋದಿ ಜನವರಿ 24ರಂದು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಭಯೋತ್ಪಾದನೆ ವಿರುದ್ಧದ ಹೋರಾಟ, ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಉಭಯ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡಲು ಈ ಮಾತುಕತೆ ವೇಳೆ ಉಭಯ ಗಣ್ಯರು ನಿರ್ಧರಿಸಿದ್ದರು. ವಿಶ್ವದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತವನ್ನು ನೈಜ ಸ್ನೇಹಿತ ಎಂದು ಅಮೆರಿಕ ಪರಿಗಣಿಸುತ್ತದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News