ಬೀದಿ ನಾಯಿಗಳಿಗೆ ಆಹಾರವಾದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ
Update: 2017-03-29 12:19 IST
ರಾಜಘಡ, ಮಾ.29: ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ 80ರ ಹರೆಯದ ವೃದ್ದೆಯೊಬ್ಬರನ್ನು ಬೀದಿ ನಾಯಿಗಳು ಆಸ್ಪತ್ರೆಯಿಂದ ಎಳೆದೊಯ್ದು ಆಕೆಯನ್ನು ಕೊಂದು ತಿಂದು ಹಾಕಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜಘಡದಲ್ಲಿ ನಡೆದಿದೆ.
ಗುನಾ ಜಿಲ್ಲೆಯ ಮಧುಸೂಧನಘಡದ ವೃದ್ಧೆ ಬಿಸ್ಮಿಲ್ಲಾ ಎಂಬವರೇ ಬೀದಿ ನಾಯಿಗಳಿಗೆ ಆಹಾರವಾದ ವೃದ್ದೆ. ಆಕೆ ಮಾರ್ಚ್ 19ರಂದು ಆಸ್ಪತ್ರೆಯಿಂದ ಕಾಣೆಯಾಗಿದ್ದರು.ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಸೋಮವಾರ ಶೌಚಾಲಯ ಶುಚಿಗೊಳಿಸಲು ಆಗಮಿಸಿದ್ದ ಕೆಲಸಗಾರರಿಗೆ ಶೌಚಾಲಯದ ಬಳಿ ಕಾಣೆಯಾದ ವೃದ್ದೆಯ ತಲೆ ಮತ್ತು ದೇಹದ ಅವಶೇಷಗಳು ಪತ್ತೆಯಾಗಿದೆ. ನಾಪತ್ತೆಯಾಗಿದ್ದ ವೃದ್ದೆಯ ತಲೆ ಮತ್ತು ದೇಹದ ಮೇಲ್ಬಾಗವನ್ನು ಪತ್ತೆ ಹಚ್ಚಿದ್ದಾರೆ. ವೃದ್ದೆಯನ್ನು ನಾಯಿಗಳು ಎಳೆದಾಡಿರುವ ಗುರುತುಗಳು ಪತ್ತೆಯಾಗಿದೆ. ವೃದ್ಧೆಯನ್ನು ಕೊಂದು ಹಾಕಿರುವ ನಾಯಿಗಳು ಆಕೆಯ ಮೃತದೇಹವನ್ನು ತಿಂದು ಮುಗಿಸಿದೆ.