ಮಂಡೇಲಾ ಆಪ್ತ ಅಹ್ಮದ್ ಇನ್ನಿಲ್ಲ

Update: 2017-03-29 07:54 GMT

ಜೋಹಾನ್ಸ್ ಬರ್ಗ್, ಮಾ. 29: ದಕ್ಷಿಣಾಫ್ರಿಕದಲ್ಲಿನೆಲ್ಸನ್ ಮಂಡೇಲಾರ ಜೊತೆ ವರ್ಣತಾರತಮ್ಯದ ವಿರುದ್ಧ ಹೋರಾಡಿದ ಅಹ್ಮದ್ ಕತ್ರಾದ ನಿಧನರಾಗಿದ್ದಾರೆ. ಮಂಗಳವಾರ ಬೆಳಗ್ಗೆ ಜೊಹನ್ಸ್‌ಬರ್ಗ್ ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೆದುಳಿನಲ್ಲಿ ರಕ್ತಹೆಪ್ಪುಕಟ್ಟಿದ್ದಕಾಗಿ ಈ ತಿಂಗಳು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಭಾರತೀಯ ಮೂಲದ ಅವರು 1929ರಲ್ಲಿ ಜನಿಸಿದರು. ಅವರ ಹೆತ್ತವರು ಗುಜರಾತ್‌ನಿಂದ ಜೋಹಾನ್ಸ್‌ಬರ್ಗ್‌ಗೆ ವಲಸೆ ಬಂದಿದ್ದರು. ಕತ್ರಾದ ವರ್ಣತಾರತಮ್ಯದ ವಿರುದ್ಧ ತನ್ನ ಹದಿನೇಳನೆ ವರ್ಷದಲ್ಲಿ ಹೋರಾಟಕ್ಕೆ ದುಮುಕಿದ್ದರು . 1964ರಲ್ಲಿ ನೆಲ್ಸನ್ ಮಂಡೇಲ ಜೊತೆ ಇವರನ್ನು ಜೈಲಿಗೆ ಅಟ್ಟಲಾಗಿತ್ತು.

26ವರ್ಷ ಜೈಲು ವಾಸದ ಬಳಿಕ ಬಿಡುಗಡೆಗೊಂಡಿದ್ದರು. ಮಂಡೇಲಾ ನಿಧನರಾದಾಗ ನಡೆಸಿದ ಭಾವಾವೇಶದ ಭಾಷಣದಲ್ಲಿ ತಾನು ಸಹೋದರನನ್ನು ಕಳೆದು ಕೊಂಡಿದ್ದೇನೆ ಎಂದು ಹೇಳಿದ್ದರು. ಮಾಜಿ ಆರೋಗ್ಯ ಸಚಿವೆ ಬರ್ಬರಾ ಹೋಗನ್ ಪತ್ನಿಯಾಗಿದ್ದಾರೆ. ನೋ ಬ್ರೆಡ್ ಫಾರ್ ಮಂಡೆಲಾ ಎನ್ನುವ ಹೆಸರಿನಲ್ಲಿ ಆತ್ಮಕಥಾಂಶಗಳಿರುವ ಒಂದು ಗ್ರಂಥವನ್ನು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News