ರಾಷ್ಟ್ರಪತಿ ಹುದ್ದೆಯಲ್ಲಿ ನನಗೆ ಆಸಕ್ತಿ ಇಲ್ಲ : ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್

Update: 2017-03-29 14:27 GMT

ನಾಗ್ಪುರ, ಮಾ.29: ರಾಷ್ಟ್ರಪತಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ನನಗೆ ಅದರಲ್ಲಿ ಆಸಕ್ತಿ ಇಲ್ಲ. ಆ ಹುದ್ದೆಗೆ ಯಾರಾದರೂ ನನ್ನನ್ನು ಸೂಚಿಸಿದರೂ  ನಾನು  ಒಪ್ಪಿಕೊಳ್ಳಲಾರೆ ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆಯಲ್ಲಿ  ಮೋಹನ್‌ ಭಾಗವತ್ ಇದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು "ನನಗೆ ಅಂತಹ ಹುದ್ದೆ ಬೇಡ.ನಾನೊಬ್ಬ  ಆರ್‌ಎಸ್‌ಎಸ್ ಸದಸ್ಯನಾಗಿ ಎಲ್ಲವನ್ನು ಸಮಾಜಕ್ಕಾಗಿ ಮತ್ತು ಆ ಸಂಘಟನೆಗಾಗಿ ನನ್ನನ್ನು ಅರ್ಪಿಸಿದ್ದೇನೆ” ಎಂದರು.
  ಮೋಹನ್‌ ಭಾಗವತ್‌ ಅವರು ರಾಷ್ಟ್ರಪತಿ ಹುದ್ದೆಗೆ ಸರಿಯಾದ ಆಯ್ಕೆ ಎಂದು  ಶಿವಸೇನಾ ಎಂಪಿ ಸಂಜಯ್‌ ರಾವುತ್‌ ಅವರು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News