ಬಾಯಾರಿಕೆಯಿಂದ ಬಳಲುತ್ತಿದ್ದ ಕಾಳಿಂಗ ಸರ್ಪ ಬಾಟ್ಲಿ ನೀರು ಕುಡಿಯಿತು!

Update: 2017-03-30 09:33 GMT

ಜಾಗತಿಕ ತಾಪಮಾನದಲ್ಲಿ ಏರಿಕೆ, ದಿನೇ ದಿನೇ ಕಡಿಮೆಯಾಗುತ್ತಿರುವ ಅರಣ್ಯ ಮತ್ತು ಹೆಚ್ಚುತ್ತಿರುವ ಉಷ್ಣತೆ.....ಇವುಗಳ ಬಿಸಿ ಮಾನವರಿಗಿಂತ ಹೆಚ್ಚು ತಗುಲಿರುವುದು ಪ್ರಾಣಿಗಳಿಗೆ. ಬೇಸಿಗೆ ಕಾಲಿಡುವುದರೊಂದಿಗೆ ದೇಶದ ಹಲವು ಪ್ರದೇಶಗಳಲ್ಲಿ ನೀರಿಗೆ ತತ್ವಾರವಾಗಿದ್ದು, ಬರದ ದವಡೆಗೆ ಸಿಲುಕಿವೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿಯೂ ಇಂತಹುದೇ ಪರಿಸ್ಥಿತಿಯಿದೆ. ಜಲಮೂಲಗಳು ಬತ್ತಿ ಪ್ರಾಣಿಗಳು ನೀರಿಗಾಗಿ ಹಾಹಾಕಾರ ಪಡುತ್ತಿದ್ದು, ಬಾಯಾರಿಕೆ ಯಿಂದ ತತ್ತರಿಸಿದ್ದ ಕಾಳಿಂಗ ಸರ್ಪವೊಂದು ಬಾಟ್ಲಿಯಲ್ಲಿನ ನೀರನ್ನು ಕುಡಿಯುತ್ತಿರುವ ವೀಡಿಯೊ ವೈರಲ್ ಆಗಿದೆ. ನೀರನ್ನು ಅರಸಿಕೊಂಡು ಅರಣ್ಯದಿಂದ ಕದ್ರಾ ಗ್ರಾಮಕ್ಕೆ ನುಸುಳಿದ್ದ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅದನು ರಕ್ಷಿಸಿದ ಬಳಿಕ ಧೈರ್ಯವಂತ ಅಧಿಕಾರಿಯೋರ್ವರು ತನ್ನ ಬಳಿಯಿದ್ದ ನೀರು ತುಂಬಿದ್ದ ಬಾಟ್ಲಿಯನ್ನು ಕಾಳಿಂಗ ಸರ್ಪದತ್ತ ಚಾಚಿದ್ದರು. ಅಲ್ಲಿದ್ದ ಪ್ರತಿಯೊಬ್ಬರೂ ಅಚ್ಚರಿ ಪಡುವಂತೆ ಬಾಯೊಣಗಿದ್ದ ಅದು ಬಾಟ್ಲಿಯಲಿದ್ದ ಅಷ್ಟೂ ನೀರನ್ನು ಕುಡಿದು ಮುಗಿಸಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News