×
Ad

ಮುಖ್ಯಮಂತ್ರಿಯನ್ನು ನಿಂದಿಸಿ ಫೇಸ್‌ಬುಕ್ ಪೋಸ್ಟ್: ಶಿಕ್ಷಕ ಅಮಾನತು

Update: 2017-03-30 17:23 IST

ತಿರುವನಂತಪುರಂ,ಮಾ. 30: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಫೇಸ್‌ಬುಕ್‌ನಲ್ಲಿ ನಿಂದಿಸಿದ ಅಧ್ಯಾಪಕನನ್ನು ಅಮಾನತು ಮಾಡಲಾಗಿದೆ. ವಯನಾಡ್ ಚೆನ್ನಲೋಡ್ ಸರಕಾರಿ ಯುಪಿ ಸ್ಕೂಲ್ ಮಾಜಿ ಅಧ್ಯಾಪಕ ಮತ್ತು ಸರಕಾರಿ ಹೈಸ್ಕೂಲ್ ಯುಪಿಎಸ್‌ಎ ಆದ ಶಾಜು ಜಾನ್ ಅಮಾನತಿಗೊಳಗಾದ ಶಿಕ್ಷಕನಾಗಿದ್ದಾರೆ.

ವಯನಾಡ್ ಶಿಕ್ಷಣ ಉಪನಿರ್ದೇಶಕರ ವರದಿಯ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಮುಖ್ಯಮಂತ್ರಿ ಮತ್ತು ಸಚಿವರು ಹಾಗೂ ಸರಕಾರವನ್ನು ಅಸಭ್ಯ ಪದಬಳಸಿ ಆರೋಪಿಸಿ ಶಿಕ್ಷಕ ನಿಂದಿಸಿದ್ದಾನೆಂದು ವಯನಾಡ್ ಶಿಕ್ಷಣ ಉಪ ನಿರ್ದೇಶಕರು ವರದಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News