ಪ್ಲಾಸ್ಟಿಕ್ ಹಾಲು!
Update: 2017-03-31 00:13 IST
ಮಾನ್ಯರೆ,
ಇತ್ತೀಚೆಗೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಮೊಟ್ಟೆಗಳು ಸುದ್ದಿ ಮಾಡುತ್ತಿದ್ದು, ಈಗ ಪ್ಲಾಸ್ಟಿಕ್ ಹಾಲು ಕೂಡಾ ಆ ಸಾಲಿಗೆ ಸೇರಿದ್ದು ದೌರ್ಭಾಗ್ಯ. ರಾಜ್ಯದ ಗಡಿಭಾಗದಲ್ಲಿ ಪ್ಲಾಸ್ಟಿಕ್‌ನಂತಹ ರಾಸಾಯನಿಕಗಳಿಂದ ತಯಾರಿಸಿದ ಹಾಲು ಮಾರಾಟವಾಗು ತ್ತಿದೆಯೆಂದು ಮಾಧ್ಯಮಗಳಿಂದ ಸುದ್ದಿಯಾಗುತ್ತಿದೆ. ಚೀನಾದಲ್ಲಿ ಈಗಾಗಲೇ ಇಂತಹ ರಾಸಾಯನಿಕಗಳಿಂದ ತಯಾರಿಸಿದ ಹಾಲನ್ನು ಕುಡಿದು ಸಾವಿರಾರು ಮಕ್ಕಳು ಕಿಡ್ನಿ ಕಾಯಿಲೆಗೊಳಗಾಗಿ, ಕೆಲವು ಮಕ್ಕಳು ಜೀವತೆತ್ತಿರುವುದೂ ಸುದ್ದಿಯಾಗಿತ್ತು.
ಆದ್ದರಿಂದ ಸರಕಾರ ಇಂತಹ ಅಕ್ರಮ ಚಟುವಟಿಕೆ ನಡೆಸುವವರನ್ನು ಕೂಡಲೇ ಪತ್ತೆ ಹಚ್ಚಿ, ಜನತೆ ಇದಕ್ಕೆ ಬಲಿಬೀಳುವ ಮೊದಲೇ ಕಾಪಾಡಬೇಕಾಗಿದೆ.