×
Ad

ಅರಣ್ಯ ನಾಶ ನಿಲ್ಲಲಿ

Update: 2017-03-31 00:15 IST

ಮಾನ್ಯರೆ,

ವಿಶ್ವ ಬ್ಯಾಂಕಿನ ಸಮೀಕ್ಷೆಯೊಂದರ ಪ್ರಕಾರ ಭಾರತ ಅರಣ್ಯ ನಾಶದಲ್ಲಿ ಎರಡನೆ ಸ್ಥಾನ ಹೊಂದಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಮರಗಿಡಗಳಿಂದ ಕೂಡಿದ ಹಸಿರು ಸಂಪದ್ಭ್ಬರಿತ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡುವುದನ್ನು ಬಿಟ್ಟು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮತ್ತು ನಗರೀಕರಣಕ್ಕಾಗಿ ತನ್ನ ಸುತ್ತಲಿನ ಪರಿಸರ ಹಾಳು ಮಾಡುವುದರ ಜೊತೆಗೆ ಅರಣ್ಯವನ್ನೂ ನಾಶಪಡಿಸುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಗಿಡಮರಗಳ ಮಾರಣಹೋಮ ಯಾರ ಅಡ್ಡಿ ಆತಂಕವಿಲ್ಲದೆ ನಡೆಯುತ್ತಿದೆ. ಇದರ ದುಷ್ಪರಿಣಾಮದಿಂದಾಗಿ ಇಂದು ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬರಗಾಲ ಎದುರಿಸುತ್ತಿದ್ದೇವೆ.
ಸರಕಾರಗಳು ಜಾರಿಗೊಳಿಸುವ ಹಲವು ಯೋಜನೆಗಳಿಂದಲೂ ಲಕ್ಷಾಂತರ ಎಕರೆಗಳಷ್ಟು ಅರಣ್ಯ ಪ್ರದೇಶಗಳು ನಾಶವಾಗುತ್ತಿವೆ. ಇವೆಲ್ಲದರ ಫಲಿತಾಂಶವಾಗಿ ವಿಪರೀತ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಓರೆನ್ ಪದರ ಕೂಡಾ ಅಪಾಯದ ಮಟ್ಟ ತಲುಪಿದೆ. ಆದ್ದರಿಂದ ಪ್ರಜ್ಞಾವಂತ ನಾಗರಿಕ ಸಮಾಜ ಈಗಲಾದರೂ ಎಚ್ಚತ್ತುಕೊಳ್ಳಬೇಕಿದೆ. ಪರಿಶುದ್ಧ ಗಾಳಿ, ಔಷಧಿ, ಮಳೆ ಹಾಗೂ ಮನುಷ್ಯನಿಗೆ ಬೇಕಾದ ಇನ್ನಿತರ ಮೂಲಭೂತ ಆವಶ್ಯಕತೆಗಳನ್ನು ಅರಣ್ಯ ಒದಗಿಸುತ್ತಿದೆ. ಹಾಗಾಗಿ ದೇಶದ ನೈಸರ್ಗಿಕ ಸಂಪತ್ತಾಗಿರುವ ಮರಗಿಡಗಳನ್ನು, ಅರಣ್ಯ ಪ್ರದೇಶಗಳನ್ನು ಸಂರಕ್ಷಣೆ ಮಾಡಬೇಕಿದೆ. ಆಗ ಮಾತ್ರ ಮನುಷ್ಯ ಮುಂದಿನ ಪೀಳಿಗೆಗೆ ಆರೋಗ್ಯಕರ ಸಮಾಜ ಕೊಡಲು ಸಾಧ್ಯ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News