×
Ad

ಕಾಫಿ ಕುಡಿಯಲು ತೆರಬೇಕಾದ ಬೆಲೆಯೆಷ್ಟು ?

Update: 2017-03-31 12:01 IST

ಹೊಸದಿಲ್ಲಿ, ಮಾ.31: ಇಲ್ಲಿನ ನ್ಯಾಷನಲ್ ಲಾ ಯುನಿವರ್ಸಿಟಿ ವಿದ್ಯಾರ್ಥಿ ಅರ್ಪಣ್ ವರ್ಮ ಇದೀಗ ಬಂಧನ ಭೀತಿ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕೆಫೆ ಕಾಫಿ ಡೇ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬಳು ಪೊಲೀಸ್ ದೂರು ನೀಡಿದ್ದು ವರ್ಮ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ವರ್ಮ ಇತ್ತೀಚೆಗೆ ಜೈಪುರದ ಕೆಫೆ ಕಾಫಿ ಡೇ ರೆಸ್ಟೋರೆಂಟಿಗೆ ಹೋಗಿದ್ದ ಸಂದರ್ಭ ಅಲ್ಲಿನ ಫ್ರಿಜ್ಜಿನಲ್ಲಿದ್ದ ಜಿರಳೆಗಳು ಹಾಗೂ ಕೀಟಗಳನ್ನು ಗಮನಿಸಿ ದೂರು ನೀಡಿದ್ದರೂ ಸಂಸ್ಥೆ ಸಿಬ್ಬಂದಿ ಅದನ್ನು ನಿರ್ಲಕ್ಷ್ಯಿಸಿದ್ದಲ್ಲದೆ ಅಲ್ಲಿನ ಮಹಿಳಾ ಉದ್ಯೋಗಿಯೊಬ್ಬಳು ಅವರ ಕೆನ್ನೆಗೂ ಹೊಡೆದಿದ್ದ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕೆಡ್‌ ಸಿಸಿಡಿ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ವೈರಲ್ ಆಗಿತ್ತು. ಈ ವೀಡಿಯೋವನ್ನು ನಿಖಿಲ್ ಆನಂದ್ ಸಿಂಗ್ ಎಂಬವರು ಅಪ್ ಲೋಡ್ ಮಾಡಿದ್ದರು.

ಇದೀಗ ಕೆಫೆ ಕಾಫಿ ಡೇ ಉದ್ಯೋಗಿ ತನ್ನ ದೂರಿನಲ್ಲಿ ವರ್ಮ ತನಗೆ ಕಿರುಕುಳ ನೀಡಿ ತನ್ನ ಮಾನಭಂಗ ನಡೆಸಲು ಯತ್ನಿಸಿದ್ದಾಗಿಯೂ ಆರೋಪಿಸಿದ್ದಾಳೆ.

ಈ ವಿಚಾರದ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೆಫೆ ಕಾಫಿ ಡೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News