×
Ad

ಮೋದಿ ಒಂದು ಪತ್ರಕ್ಕೂ ಉತ್ತರಿಸಿಲ್ಲ, ಲೋಕ್‌ಪಾಲ್‌ಗಾಗಿ ಮತ್ತೆ ಹೋರಾಟ: ಅಣ್ಣಾ ಹಝಾರೆ

Update: 2017-03-31 12:28 IST

ಮುಂಬೈ, ಮಾ.31: ಲೋಕ್‌ಪಾಲ್ ಜಾರಿ ಆಗ್ರಹಿಸಿ ಅಣ್ಣಾಹಝಾರೆ ಮತ್ತೆ ಸತ್ಯಾಗ್ರಹಕ್ಕೆ ಸಿದ್ಧರಾಗುತ್ತಿದ್ದಾರೆ. ಈ ಕುರಿತು ಪ್ರಧಾನಿ ಮೋದಿಗೆ ತಾನು ಪತ್ರ ಬರೆದಿದ್ದೇನೆಂದು ಅಣ್ಣಾಹಝಾರೆ ತಿಳಿಸಿದ್ದಾರೆ. ಮುಂದಿನ ಪತ್ರದಲ್ಲಿ ಇತರ ವಿವರಗಳನ್ನು ಪ್ರಧಾನಿಗೆ ತಿಳಿಸುವೆ. ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ಭ್ರಷ್ಟಾಚಾರ ಹರಡುತ್ತಿದೆ. ಇದನ್ನೆಲ್ಲ ನೋಡಿ ನಿಲ್ಲಲು ತನ್ನಿಂದ ಸಾಧ್ಯವಿಲ್ಲ.

ನರೇಂದ್ರಮೋದಿಯಾದರೂ ಲೋಕ್‌ಪಾಲ್ ಜಾರಿಗೊಳಿಸುತ್ತಾರೆನ್ನುವ ನಿರೀಕ್ಷೆ ಸುಳ್ಳಾಯಿತು ಎಂದು ಅಣ್ಣಾ ಹಝಾರೆ ವಿಷಾದದಿಂದ ಹೇಳಿದರು. 40 ಬಾರಿ ಪತ್ರ ಬರೆದು ಲೋಕ್‌ಪಾಲ್ ಮತ್ತು ಲೋಕಾಯುಕ್ತ ಜಾರಿಗೊಳಿಸುವುದಕ್ಕಾಗಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ವಿನಂತಿಸಿದರೂ ಅವರುಸ್ಪಂಧಿಸಲಿಲ್ಲ. ಆದ್ದರಿಂದ ಅನ್ನಸತ್ಯಾಗ್ರಹ ಮಾಡಬೇಕಾಯಿತು. ಅಂದು ನಾವು ಅಧಿಕಾರಕ್ಕೆ ಬಂದ ಕೂಡಲೇ ಲೋಕ್‌ಪಾಲ್ ಜಾರಿಗೊಳಿಸುತ್ತೇವೆಂದು ಬಿಜೆಪಿ ಹೇಳಿತ್ತು. ಮನ್‌ಮೋಹನ್ ಸಿಂಗ್ 20 ಪತ್ರಗಳಿಗೆ ಉತ್ತರಿಸಿದ್ದಾರೆ. ಆದರೆ ಪ್ರಧಾನಿಮೋದಿ ಒಂದೇ ಒಂದು ಪತ್ರಕ್ಕೂ ಪ್ರತಿಕ್ರಿಯಿಸಿಲ್ಲ. ಅಧಿಕಾರ ಕಳಕೊಳ್ಳುವ ಭೀತಿಯಿಂದ ಲೋಕ್‌ಪಾಲ್‌ನ್ನು ಮೋದಿ ಜಾರಿಗೊಳಿಸಲು ಹೆದರುತ್ತಿದ್ದಾರೆ ಎಂದು ಹಝಾರೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News