ಅಮೆರಿಕದಲ್ಲಿ ಕೊಲೆಯಾದ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಗಂಡನಿಗೆ ಅನುಮತಿ

Update: 2017-03-31 14:28 GMT

ನ್ಯೂಯಾರ್ಕ್, ಮಾ. 31: ಅಮೆರಿಕದ ನ್ಯೂಜರ್ಸಿಯಲ್ಲಿ ತನ್ನ ಮಗುವಿನೊಂದಿಗೆ ಹತ್ಯೆಗೀಡಾದ ಆಂಧ್ರಪ್ರದೇಶದ ಮಹಿಳೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಿ ಭಾರತಕ್ಕೆ ಹೋಗಲು ಆಕೆಯ ಗಂಡನಿಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

38 ವರ್ಷದ ಶಶಿಕಲಾ ಮತ್ತು ಅವರ 7 ವರ್ಷದ ಮಗ ಕಳೆದ ಗುರುವಾರ ನ್ಯೂಜರ್ಸಿಯ ಅವರ ಮನೆಯಲ್ಲಿ ಮೃತಪಟ್ಟಿದ್ದರು.

ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಮಹಿಳೆಯ ಗಂಡ ಹನುಮಂತ ರಾವ್‌ರ ಚಲನವಲನಗಳನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸಿಲ್ಲ ಎಂದು ಬರ್ಲಿಂಗ್ಟನ್ ಕೌಂಟಿ ಪ್ರಾಸಿಕ್ಯೂಟರ್‌ರ ವಕ್ತಾರ ಜೋಯಲ್ ಬ್ಯೂಲೆ ಹೇಳಿರುವುದಾಗಿ ಅಮೆರಿಕದ ಸ್ಥಳೀಯ ಚಾನೆಲೊಂದು ವರದಿ ಮಾಡಿದೆ.

‘‘ಅವರ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿಲ್ಲ’’ ಎಂದು ಅದು ತಿಳಿಸಿದೆ.

ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದಾಗ ಇಬ್ಬರ ಮೃತದೇಹಗಳನ್ನು ತಾನು ನೋಡಿರುವುದಾಗಿ ರಾವ್ ಪೊಲೀಸರಿಗೆ ಹೇಳಿದ್ದಾರೆನ್ನಲಾಗಿದೆ.ಶಶಿಕಲಾ ಮತ್ತು ಅವರ ಮಗ ಅನೀಶ್ ತಮ್ಮ ಮೇಪಲ್ ಶೇಡ್ ಮನೆಯಲ್ಲಿ ಮಾರ್ಚ್ 23ರಂದು ಚೂರಿ ಇರಿತದಿಂದ ಸಾವಿಗೀಡಾಗಿದ್ದರು.

ರಾವ್ ಓರ್ವ ಶಂಕಿತನೇ ಎಂಬ ಬಗ್ಗೆ ತಾನೇನೂ ಹೇಳುವುದಿಲ್ಲ ಎಂದು ವಕ್ತಾರರು ಚಾನೆಲ್‌ಗೆ ಹೇಳಿದರು.ರಾವ್ ಇನ್ನೋರ್ವ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬುದಾಗಿ ಮೂಲವೊಂದು ಹೇಳಿದೆ.

ರಾವ್ ಮತ್ತು ಶಶಿಕಲಾ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು ಹಾಗೂ 12 ವರ್ಷಗಳಿಂದ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News