×
Ad

14ರ ಪೋರ ಬ್ರಿಟಿಷ್ ವಿವಿಯ ಅಧ್ಯಾಪಕ

Update: 2017-04-01 13:11 IST

ಲಂಡನ್, ಎ.1: ಇಂಗ್ಲೆಂಡಿನ ಯುನಿವರ್ಸಿಟಿ ಆಫ್ ಲೀಕೆಸ್ಟರ್ ಇಲ್ಲಿನ ಅತ್ಯಂತ ಕಿರಿಯ ಅಧ್ಯಾಪಕ ಹಾಗೂ ವಿದ್ಯಾರ್ಥಿಯಾಗಿದ್ದಾನೆ ಬ್ರಿಟಿಷ್-ಇರಾನ್ ಮೂಲದ 14ರ ಪೋರ. ಈ ಬುದ್ಧಿವಂತ ಹುಡುಗನ ಹೆಸರು ಯಶ ಅಸ್ಲೆ. ಆತ ಅಲ್ಲಿನ ಇತರ ವಿದ್ಯಾರ್ಥಿಗಳಿಗೆ ಗಣಿತ ಕಲಿಸುತ್ತಾನೆ.

ಅಸ್ಲೆ 13 ವರ್ಷದವನಿರುವಾಗಲೇ ಆತ ಇತರ ಅಭ್ಯರ್ಥಿಗಳನ್ನು ಸೋಲಿಸಿ ಈ ಹುದ್ದೆಗೆ ಆಯ್ಕೆಯಾಗಿದ್ದನು. ಈ ಬಾಲಕನಿಗೆ ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಉದ್ಯೋಗವನ್ನು ಪಡೆಯಲು ಸಿಟಿ ಕೌನ್ಸಿಲ್ ವಿಶೇಷ ಅನುಮತಿಯನ್ನೂ ನೀಡಿದೆ. ವಯಸ್ಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಾಗಾರಗಳನ್ನು ಮತ್ತು ಗಣಿತದಲ್ಲಿ ಅವರ ಜ್ಞಾನ ಹೆಚ್ಚಿಸಲು ಈತ ಪ್ರಯತ್ನಿಸಲಿದ್ದಾನೆ.

ಎಂಟು ವರ್ಷದವನಿರುವಾಗಲೇ ಗಣಿತದಲ್ಲಿ ಶೇ.100 ಅಂಕಗಳನ್ನು ಪಡೆದು 'ಎ' ಗ್ರೇಡ್ ಪಡೆದ ವಿಶ್ವದ ಮೊದಲ ಬಾಲಕ ಈತನಾಗಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News