ಕೊಲಂಬಿಯದಲ್ಲಿ ಭೂಕುಸಿತ : 14 ಸಾವು

Update: 2017-04-01 15:13 GMT

ಬೊಗೊಟ (ಕೊಲಂಬಿಯ), ಎ. 1: ಕೊಲಂಬಿಯದ ನೈರುತ್ಯ ಗಡಿ ರಾಜ್ಯ ಪುಟುಮಯೊದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 60 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿಹರಿಯುತ್ತಿವೆ ಹಾಗೂ ನೀರಿನ ಜೊತೆಗೆ ಕೊಚ್ಚಿಕೊಂಡು ಬರುವ ಕೆಸರು ಪ್ರಾಂತೀಯ ರಾಜಧಾನಿ ಮೊಕೋದ ಮನೆಗಳು ಮತ್ತು ರಸ್ತೆಗಳಲ್ಲಿ ಜಮಾವಣೆಗೊಳ್ಳುತ್ತಿವೆ.

‘‘ನಾವಿಲ್ಲಿ ತುಂಬಾ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ’’ ಎಂದು ದೇಶದ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಕಾರ್ಲೋಸ್ ಇವಾನ್ ಮರ್ಕೇಝ್ ‘ಕರಕೊಲ್ ರೇಡಿಯೊ’ಗೆ ಹೇಳಿದರು.

ಮಧ್ಯ ರಾತ್ರಿ ಪ್ರವಾಹ ಉಕ್ಕೇರಿದಾಗ ಜನರು ತಮ್ಮ ಮನೆಗಳಿಂದ ಹೊರಗೋಡಿದರು. ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡವರಿಗಾಗಿ ಜನರು ಶೋಧ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News