156 ಉಪಗ್ರಹ ಜಾಲ ಉಡಾವಣೆಗೆ ಚೀನಾ ಸಿದ್ಧತೆ

Update: 2017-04-01 15:28 GMT

ಬೀಜಿಂಗ್, ಎ. 1: ಜಾಗತಿಕ ಬ್ರಾಡ್‌ಬ್ಯಾಂಡ್ ಸೇವೆಯನ್ನು ಉತ್ತಮಪಡಿಸುವುದಕ್ಕಾಗಿ ಚೀನಾವು 156 ಕಿರು ಉಪಗ್ರಹಗಳ ಜಾಲವೊಂದನ್ನು ಉಡಾಯಿಸಲಿದೆ.

ಇದು ಕಡಿಮೆ ಎತ್ತರದಲ್ಲಿ ಪ್ರದಕ್ಷಿಣೆ ಬರುವ ಮೊದಲ ಉಪಗ್ರಹ ಜಾಲ ಯೋಜನೆಯಾಗಿದೆ. ಅದು ಭೂಮಿಯಿಂದ 1,000 ಕಿ.ಮೀ. ಎತ್ತರದಲ್ಲಿ ಪ್ರದಕ್ಷಿಣೆ ಬರಲಿದೆ ಎಂದು ಸರಕಾರಿ ಒಡೆತನದ ಚೀನಾ ವಾಯು ವಿಜ್ಞಾನ ಮತ್ತು ಉದ್ದಿಮೆ ನಿಗಮ ಹೇಳಿದೆ.

ವಾಣಿಜ್ಯ ಬಾಹ್ಯಾಕಾಶ ಕಾರ್ಯಕ್ರಮ ಅಭಿವೃದ್ಧಿಗೆ ಒತ್ತು ನೀಡುವುದಕ್ಕಾಗಿ ರೂಪಿಸಲಾದ ಯೋಜನೆ ಇದಾಗಿದೆ.ತಗ್ಗಿನ ಕಕ್ಷೆಯು ಸಿಗ್ನಲ್ ವಿಳಂಬವನ್ನು ತಡೆಯುತ್ತದೆ.ಈ ಸರಣಿಯ ಮೊದಲ ಉಪಗ್ರಹ 2018ರಲ್ಲಿ ಬಾಹ್ಯಾಕಾಶಕ್ಕೆ ಹಾರುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News