ಫ್ರಾಂಕ್‌ಫರ್ಟ್: ಭಾರತೀಯ ಮಹಿಳೆಯ ಬಟ್ಟೆ ಬಿಚ್ಚಿಸಿದ ಭದ್ರತಾ ಸಿಬ್ಬಂದಿ

Update: 2017-04-02 04:18 GMT

ಫ್ರಾಂಕ್‌ಫರ್ಟ್, ಎ.2: ಭದ್ರತಾ ತಪಾಸಣೆಯ ನೆಪದಲ್ಲಿ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಭಾರತೀಯ ಮಹಿಳೆಯೊಬ್ಬರ ಬಟ್ಟೆ ಕಳಚಲು ಸೂಚಿಸಿದರು ಎಂದು ಆರೋಪಿಸಲಾಗಿದ್ದು, ಈ ಪ್ರಕರಣ ಇದೀಗ ವಿವಾದ ಸೃಷ್ಟಿಸಿದೆ.

ಜರ್ಮನಿ ಮೂಲಕ ಐಸ್‌ಲ್ಯಾಂಡ್‌ಗೆ ಕುಟುಂಬದ ಜತೆ ಪ್ರಯಾಣಿಸುವ ಸಂದರ್ಭ ಈ ಘಟನೆ ನಡೆದಿದೆ. ಕುಟುಂಬದ ಇತರ ಎಲ್ಲರನ್ನೂ ಬಿಟ್ಟು, ಈ ಮಹಿಳೆಯನ್ನು ಮಾತ್ರ ಪಕ್ಕಕ್ಕೆ ಕರೆದೊಯ್ದು ಬಟ್ಟೆ ಕಳಚಲು ಸೂಚಿಸಲಾಗಿದೆ. ಇದು ವರ್ಣಭೇದ ನೀತಿಯ ಕ್ರಮ ಎಂದು ದೂರಲಾಗಿದೆ.

30 ವರ್ಷ ವಯಸ್ಸಿನ ಮಹಿಳೆ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದು, ಐಸ್‌ಲ್ಯಾಂಡ್‌ನ ನಿವಾಸಿ ಪರವಾನಿಗೆ ಹೊಂದಿದ್ದರು. ಪತಿ ಹಾಗೂ ನಾಲ್ಕು ವರ್ಷದ ಮಗಳ ಜತೆ ಐಸ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸುವಾಗ ಈ ಘಟನೆ ನಡೆದಿದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ. ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಬೇಕಾಗಿದೆ ಎಂಬ ಕಾರಣ ನೀಡಿ ಭದ್ರತಾ ಸಿಬ್ಬಂದಿ ಪಕ್ಕಕ್ಕೆ ಕರೆದೊಯ್ದರು ಎಂದು ಹೇಳಿದ್ದಾರೆ.

"ನನ್ನನ್ನು ಕೊಠಡಿಗೆ ಕರೆದೊಯ್ದು, ಬಟ್ಟೆ ಕಳಚಿ ತಪಾಸಣೆಗೆ ಸಜ್ಜಾಗುವಂತೆ ಸೂಚಿಸಲಾಯಿತು. ಬಟ್ಟೆಯಲ್ಲಿ ಏನನ್ನೂ ಒಯ್ಯುತ್ತಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ತಪಾಸಣೆ ನಡೆಸಬೇಕಿದೆ ಎಂದವರು ಹೇಳಿದರು. ನಾಲ್ಕು ವರ್ಷದ ಮಗುವಿನ ಮುಂದೆ ಈ ರೀತಿ ಮಾಡಲಾಯಿತು" ಎಂದು ಸಂತ್ರಸ್ತ ಮಹಿಳೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News