×
Ad

ಗೆದ್ದರೆ ಒಳ್ಳೆಯ ಬೀಫ್ ಸಿಗುವಂತೆ ಮಾಡುತ್ತೇನೆ: ಮಲಪ್ಪುರಂ ಬಿಜೆಪಿ ಅಭ್ಯರ್ಥಿ

Update: 2017-04-02 12:40 IST

ಮಲಪ್ಪುರಂ, ಎ. 2: ಉಪಚುನಾವಣೆಯಲ್ಲಿ ಗೆದ್ದರೆ ಕಸಾಯಿಖಾನೆಗಳಲ್ಲಿ ಉತ್ತಮ ಬೀಫ್ ಲಭ್ಯವಾಗುವಂತೆ ಮಾಡುತ್ತೇನೆಂದು ಮಲಪ್ಪುರಂ ಲೋಕಸಭ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಎನ್‌ಡಿಎಅಭ್ಯರ್ಥಿ ಎನ್. ಶ್ರೀಪ್ರಕಾಶ್ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಒಳ್ಳೆಯ ಬೀಫ್ ಲಭ್ಯಗೊಳಿಸಲಿಕ್ಕಾಗಿ  ಕಸಾಯಿಖಾನೆಗಳಲ್ಲಿ ಹವಾನಿಯಂತ್ರಿತ ಸುಧಾರಣೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಸಿಪಿಎಂ ಯುಡಿಎಫ್‌ನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ. ಎಸ್‌ಡಿಪಿಐ, ಪಿಡಿಪಿ, ವೆಲ್ಫೇರ್ ಪಾರ್ಟಿ, ಸಿಪಿಎಂಗಳ ಅಭ್ಯರ್ಥಿ ಕುಂಞಾಲಿಕುಟ್ಟಿಯಾಗಿದ್ದಾರೆ.

ಮಲಪ್ಪುರಂನಲ್ಲಿ ಬಿಜೆಪಿ ಮತ್ತು ಕೇಂದ್ರ ಸರಕಾರ ವಿರೋಧಿಗಳ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಜನರಲ್ಲಿ ಮೋದಿ ಸರಕಾರದ ಕುರಿತು ಉತ್ತಮ ಅಭಿಪ್ರಾಯವಿದೆ. ಅದು ಈ ಚುನಾವಣೆಯಲ್ಲಿ ಕಂಡು ಬರಲಿದೆ ಎಂದು ಎನ್. ಪ್ರಕಾಶ್ ಹೇಳಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಹಾಶಿಂ ಎಳಮರಂ, ಸಹಕಾರ್ಯದರ್ಶಿ ಎಸ್.ಮಹೇಶ್ ಕುಮಾರ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News