×
Ad

ಮಾದಕ ದ್ರವ್ಯ ಕಳ್ಳಸಾಗಣೆ: ಶ್ರೀಲಂಕಾ ನೌಕಾಪಡೆಯಿಂದ ಆರು ಭಾರತೀಯರ ಸೆರೆ

Update: 2017-04-02 14:36 IST

ಕೋಲಂಬೊ,ಎ.2: ದೇಶದೊಳಕ್ಕೆ 13.5 ಕೆ.ಜಿ.ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದ ಆರು ಭಾರತೀಯರನ್ನು ರವಿವಾರ ಬೆಳಗಿನ ಜಾವ ಬಂಧಿಸಿರುವುದಾಗಿ ಶ್ರೀಲಂಕಾ ನೌಕಾಪಡೆಯು ತಿಳಿಸಿದೆ.

ಭಾರತದ ಜಲಪ್ರದೇಶದಿಂದ ಶ್ರೀಲಂಕಾ ಸಮುದ್ರವನ್ನು ಪ್ರವೇಶಿಸುತ್ತಿದ್ದ ಶಂಕಾಸ್ಪದ ದೋಣಿಯೊಂದನ್ನು ಅಂತಾರಾಷ್ಟ್ರೀಯ ಜಲಗಡಿ ರೇಖೆಯ ಬಳಿ ಪತ್ತೆ ಹಚ್ಚಿದ ನೌಕಾಪಡೆಯ ಗಸ್ತು ಹಡಗು ಅದರ ಮೇಲೆ ನಿರಂತರ ನಿಗಾಯಿರಿಸಿತ್ತು ಎಂದು ಅದು ಹೇಳಿದೆ.

ಹೆರಾಯಿನ್ ತುಂಬಿದೆ ಎನ್ನಲಾದ ಪಾರ್ಸಲ್‌ಗಳನ್ನು ಕಂಕೆಸಂತುರೈ ಬಂದರಿಗೆ ಸಾಗಿಸಲಾಗಿದ್ದು, ಬಂಧಿತ ಆರು ಭಾರತೀಯರನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿ ಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News